ತನಿಖಾ ಸಂಸ್ಥೆಗಳಿಂದ ಬಂಧನದ ಅಧಿಕಾರ ದುರುಪಯೋಗದ ವಿರುದ್ಧ ಮಾರ್ಗಸೂಚಿ: ವಿರೋಧ ಪಕ್ಷಗಳ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಪ್ರತಿಪಕ್ಷ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ‘ನಿರಂಕುಶವಾಗಿ ಬಳಸಲಾಗುತ್ತಿದೆ’ ಎನ್ನುವ ಆರೋಪ ಕೇಳಿಬರುತ್ತಿದ್ದು, ಸಿಬಿಐ ಮತ್ತು ಇಡಿ ಬಂಧನ ಅಧಿಕಾರದ ದುರುಪಯೋಗದ ವಿರುದ್ಧ ಮಾರ್ಗಸೂಚಿಗಳನ್ನು ಕೋರಿ 14 ವಿರೋಧ ಪಕ್ಷದ ರಾಜಕೀಯ ಪಕ್ಷಗಳು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.  ಬಂಧನ, ವಿಚಾರಣೆ ಮತ್ತು ಜಾಮೀನನ್ನು ನಿಯಂತ್ರಿಸುವ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಯಸಿ ಕಾಂಗ್ರೆಸ್ ನೇತೃತ್ವದಲ್ಲಿ 14 ವಿರೋಧ ಪಕ್ಷಗಳು ಸಲ್ಲಿಸಿದ್ದ […]

ಕಿಚ್ಚ ಸುದೀಪ್ ರಾಜಕೀಯ ರಂಗ ಪ್ರವೇಶವಿಲ್ಲ; ಪ್ರಚಾರ ಮಾತ್ರ: ಬೊಮ್ಮಾಯಿ-ಸುದೀಪ್ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು: ಬಹುಭಾಷಾ ನಟ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸ್ವತಃ ಸುದೀಪ್ ಅವರೇ ತೆರೆ ಎಳೆದಿದ್ದಾರೆ. ಬುಧವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯವರನ್ನು ಮಾಮಾ ಅಂತ ಕರೆಯುತ್ತೇನೆ. ಚಿತ್ರರಂಗಕ್ಕೆ ಬಂದಾಗ ನನಗೆ ಗಾಡ್ ಫಾದರ್ ಇರಲಿಲ್ಲ. ಆಗ ನನ್ನ ಜೊತೆಯಲ್ಲಿ ಕೆಲವೇ ಕೆಲವರು ನಿಂತಿದ್ದರು. ಅಂಥಹವರಲ್ಲಿ ನನ್ನ ಮಾಮ ಸಿಎಂ ಬೊಮ್ಮಾಯಿ ಒಬ್ಬರು. ಅವರು ಕೂಡಾ ಆಗ್ಅ ತಾನೇ ರಾಜಕೀಯಕ್ಕೆ ಬಂದಿದರು. ನಾನು ಅವರ […]

ನಾಳೆ ಹೆಬ್ರಿಯಲ್ಲಿ ಕಲ್ಪರಸ ಮಳಿಗೆ ಉದ್ಘಾಟನೆ..

ಹೆಬ್ರಿ: ರುಚಿಕರವೂ.. ಆರೋಗ್ಯಕರವೂ.. ಆದ ಕಲ್ಪರಸ ಇದೀಗ ಹೆಬ್ರಿಯ ಸಮೃದ್ಧಿ ಸ್ವದೇಶಿ ಆಯುರ್ವೇದ ಹೆಬ್ರಿ ಇಲ್ಲಿ ಲಭ್ಯವಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಅನ್ನುವಂತೆ ಕೆಮಿಕಲ್ ರಹಿತವಾದ ಸಕ್ಕರೆ ಖಾಯಿಲೆಯವರೂ ಬಳಸಬಹುದಾದ ಏಕೈಕ ಪಾನೀಯವೇ ಕಲ್ಪರಸ. ನಿಮ್ಮ ಹೆಬ್ರಿಯ ಬಸ್ ನಿಲ್ದಾಣದ ಎದುರುಗಡೆ ಇರುವ ರಾಮನಾಥ (ಪೂಜಾ) ಕಾಂಪ್ಲೆಕ್ಸ್ ನಲ್ಲಿ ಲಭ್ಯವಿದ್ದು, ನಾಳೆ ಇದರ ಉದ್ಘಾಟನಾ ನಡೆಯಲಿದೆ. ಉಕಾಸ ಕಂಪೆನಿಯ ಅಧಿಕೃತ ಮಾರಾಟ ಮಳಿಗೆ ಇದಾಗಿದ್ದು, ಕಲ್ಪರಸವು ಆರೋಗ್ಯಕರವಾದ ಅಮಲು ರಹಿತ ಪಾನೀಯವಾಗಿದೆ. ಏನಿದು ಕಲ್ಪರಸ: ತೆಂಗಿನಮರದ ಇನ್ನೂ […]

ಮೂಡಬಿದ್ರೆಯ ಕೃಷಿ ವಿಜ್ಞಾನಿ ಡಾ ಎಲ್ ಸಿ ಸೋನ್ಸ್ ನಿಧನ

ಮೂಡಬಿದ್ರೆ: ಮೂಡುಬಿದಿರೆ ಸಮೀಪದ ಸೋನ್ಸ್ ಫಾರಂನ ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ವಿಜ್ಞಾನಿ ಡಾ.ಎಲ್.ಸಿ.ಸೋನ್ಸ್ ಬುಧವಾರದಂದು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಮತ್ತು ಸಹೋದರ ಐ ವಿ ಸೋನ್ಸ್ ಅವರನ್ನು ಅಗಲಿದ್ದಾರೆ. ಡಾ ಸೋನ್ಸ್ 1966 ರಲ್ಲಿ ಮೊಂಟಾನಾ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪಡೆದಿದ್ದರು. ಸುಮಾರು ನಾಲ್ಕೈದು ದಶಕಗಳ ಕಾಲದಿಂದಲೂ ಮೂಡಬಿದ್ರೆಯ ತಮ್ಮ ಸ್ವಂತ ಜಮೀನಿನಲ್ಲಿ ಹಲವು ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆದು ಪ್ರಖ್ಯಾತಿ ಹೊಂದಿದ್ದರು. ಹಣ್ಣುಗಳಲ್ಲಿ […]

ಎಂಐಟಿ ವತಿಯಿಂದ ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಉಚಿತ 3D ಅನಿಮೇಷನ್ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಧ್ಯಮ ತಂತ್ರಜ್ಞಾನ ವಿಭಾಗ 6 ದಿನಗಳ ಉಚಿತ 3D ಅನಿಮೇಷನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 3D ಬಗ್ಗೆ ಕಲ್ಪನೆಯನ್ನು ಪಡೆಯಲು ಅನುಕೂಲವಾಗುವಂತೆ 3D ಅನಿಮೇಷನ್ ಕಾರ್ಯಾಗಾರವನ್ನು ಏರ್ಪಡಿಸಿದೆ. ಕಾರ್ಯಾಗಾರವು ಒಳಗೊಂಡಿರುವ ಪ್ರಮುಖ ವಿಷಯಗಳು: ಮಾಡೆಲಿಂಗ್ ಅನ್ನು ಒಳಗೊಂಡಿರುವ 3D ಅನಿಮೇಷನ್, ಟೆಕ್ಸ್ಚರಿಂಗ್, ಲೈಟಿಂಗ್ ಮತ್ತು ರಿಗ್ಗಿಂಗ್. 30 ವಿದ್ಯಾರ್ಥಿಗಳ ಗರಿಷ್ಠ ಸಾಮರ್ಥ್ಯವಾಗಿರುವುದರಿಂದ, ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಗೂಗಲ್ ಫಾರ್ಮ್‌ನಲ್ಲಿ ನೋಂದಣಿಗೆ ಕೊನೆಯ ದಿನಾಂಕ […]