ಮಂಗಳೂರು: ಮಂಗಳೂರಿನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ/ ವಿವಿಧ ಉತ್ಪನ್ನಗಳ ತಯಾರಿಕೆ ಮಾಡಿ “ನಂದಿನಿ’ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತದೆ.
ಈ ಕಾರ್ಯವನ್ನು ಬಲಪಡಿಸಲು ಕೆಲ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ.
ಒಟ್ಟು ಹುದ್ದೆಗಳು: 80
ಹುದ್ದೆಗಳಲ್ಲಿ ಎಸ್ಸಿ, ಎಸ್ಟಿ, ಪ್ರವರ್ಗ 1, 2ಎ, 2ಬಿ, 3ಎ, 3ಬಿ, ಇತರೆ ಅಭ್ಯರ್ಥಿ, ಮಹಿಳಾ, ಮಾಜಿ ಸೈನಿಕ, ಗ್ರಾಮೀಣ, ಕನ್ನಡ ಮಾಧ್ಯಮ, ಅಂಗವಿಕಲ, ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಓದಲು ಬರೆಯಲು ತಿಳಿದಿರಬೇಕು. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಹಾಗೂ ಶುಲ್ಕ ಸಲ್ಲಿಸತಕ್ಕದ್ದು.
ಹುದ್ದೆ ವಿವರ
* ಸಹಾಯಕ ವ್ಯವಸ್ಥಾಪಕ – 7
* ತಾಂತ್ರಿಕ ಅಧಿಕಾರಿ (ಡಿಟಿ)- 4
* ತಾಂತ್ರಿಕ ಅಧಿಕಾರಿ (ಪರಿಸರ-1, ಇಂಜಿನಿಯರಿಂಗ್-1) – 2
* ವಿಸ್ತರಣಾಧಿಕಾರಿ (ದರ್ಜೆ 3) – 8
* ಡೇರಿ ಸೂಪರ್ವೈಸರ್ (ದರ್ಜೆ 2) – 5
* ಆಡಳಿತ ಸಹಾಯಕ (ದರ್ಜೆ-2) – 5
* ಮಾರುಕಟ್ಟೆ ಸಹಾಯಕ (ದರ್ಜೆ 2)- 5
* ಕೆಮಿಸ್ಟ್ (ದರ್ಜೆ 2) – 12
* ಲೆಕ್ಕ ಸಹಾಯಕರು (ದರ್ಜೆ 2) – 2
* ಕಿರಿಯ ತಾಂತ್ರಿಕರು (ಎಲೆಕ್ಟ್ರಿಷಿಯನ್-6, ಎಂಆರ್ಎಎಸಿ – 7, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್- 6, ಫಿಟ್ಟರ್ – 6, ವೆಲ್ಡರ್- 2,ಬಾಯ್ಲರ್ – 3) – 30
ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಅಂಗೀಕೃತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎರಡು ವರ್ಷದ ಐಟಿಐನಲ್ಲಿ ಉತ್ತೀರ್ಣ, ಯಾವುದೇ ಪದವಿ, ಇಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಸಿವಿಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ, ಬಿಕಾಂ, ಬಿಬಿಎ, ಬಿಬಿಎಂ, ಎನ್ವಿರಾನ್ಮೆಂಟ್/ ಕೆಮಿಕಲ್ನಲ್ಲಿ ಬಿಇ/ ಎಂಎಸ್ಸಿ, ಡಿಟಿ, ರಸಾಯನಶಾಸ್ತ್ರದಲ್ಲಿ ಬಿಎಸ್ಸಿ, ಬಿಟೆಕ್ (ಡಿಟೆಕ್)/ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆಯಿಂದ ಫುಡ್ ಟೆಕ್ನಾಲಜಿಯಲ್ಲಿ ಎಂಎಸ್ಸಿ, ಪಶುವೈದ್ಯಕಿಯ ವಿಜ್ಞಾನದಲ್ಲಿ ಬಿವಿಎಸ್ಸಿ/ ಬಿವಿಎಸ್ಸಿ ಆ್ಯಂಡ್ ಎಎಚ್ ಪದವಿ.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರ ನಿಯಮದನ್ವಯ ವಯೋ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಲಿಖಿತ ಹಾಗೂ ಮೌಖಿಕ ಪರೀಕ್ಷೆಯು ಮಂಗಳೂರಿನಲ್ಲಿ ನಡೆಯಲಿದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ.,ಉಳಿದ ಅಭ್ಯರ್ಥಿಗಳಿಗೆ 800 ರೂ. ಶುಲ್ಕ ನಿಗದಿಪಡಿ ಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 28.5.2021
ಅಧಿಸೂಚನೆಗೆ: https://bit.ly/3sSWF7q
ಮಾಹಿತಿಗೆ: http://dkmul.com