ಹಿಂದೂ ಸಂಘಟನೆಯ ಮುಖಂಡನಾಗಿದ್ದ ಉದ್ಯಮಿಯ ಬರ್ಬರ ಹತ್ಯೆ

ಬೆಳ್ತಂಗಡಿ: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಉದ್ಯಮಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆಗೈದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮುಂಡಗೋಡದ ಬಡ್ಡಿಗೇರಿಯಲ್ಲಿ ಎಂಬಲ್ಲಿ‌ ಇಂದು ಸಂಜೆ ನಡೆದಿದೆ. ಮೃತ ಉದ್ಯಮಿಯನ್ನು ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆದ್ರಾಳ ನಿವಾಸಿ ಸುದರ್ಶನ್ ಯಾನೆ ಹರ್ಷ ರಾಣೆ (36) ಎಂದು ಗುರುತಿಸಲಾಗಿದೆ. ಇವರು ಇಂದು ಸಂಜೆ ಶಿರಸಿಯ ಮುಂಡಗೋಡದ ಬಡ್ಡಿಗೇರಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ […]

ಬ್ರಹ್ಮಾವರ: ಟ್ರಾನ್ಸ್ ಫಾರ್ಮರ್ ಕಂಬದಲ್ಲಿ ಬೆಂಕಿ ಅವಘಡ: ಮಳೆಯಿಂದ ತಪ್ಪಿದ ಭಾರಿ ದುರಂತ

ಚಿತ್ರ: ಪ್ರವೀಣ್ ಬ್ರಹ್ಮಾವರ ಬ್ರಹ್ಮಾವರ: ಇಲ್ಲಿನ ದೂಪದಕಟ್ಟೆಯಲ್ಲಿ ಎಂಬಲ್ಲಿ ಟ್ರಾನ್ಸ್ ಫಾರ್ಮರ್ ಕಂಬದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ರಾತ್ರಿ ನಡೆದಿದೆ. ದೂಪದ‌ಕಟ್ಟೆಯ‌ ಮಾನಸ ಬಾರ್ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಟ್ರಾನ್ಸ್ ಫಾರ್ಮರ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದರ ಪರಿಣಾಮ ಸುತ್ತಲಿನ ಸುಮಾರು 200 ಮೀಟರ್ ನಷ್ಟು ಪ್ರದೇಶಕ್ಕೆ ಬೆಂಕಿ‌ ವ್ಯಾಪಿಸಿದೆ. ಮಳೆಯಿಂದ ತಪ್ಪಿದ ಭಾರಿ ದುರಂತ: ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ನಂದಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಅದೇ […]

ಮತದಾನೋತ್ತರ ಸಮೀಕ್ಷೆ: ತಮಿಳುನಾಡಿನಲ್ಲಿ ಡಿಎಂಕೆಗೆ ಪ್ರಚಂಡ ಬಹುಮತ, ಕೇರಳದಲ್ಲಿ ಎಡರಂಗಕ್ಕೆ ಅಧಿಕಾರ ಸಾಧ್ಯತೆ

ನವದೆಹಲಿ: ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ. ತಮಿಳುನಾಡಿನಲ್ಲಿ ಆಡಳಿತರೂಢ ಎಐಎಡಿಎಂಕೆ ಹಿನ್ನಡೆ ಅನುಭವಿಸಲಿದ್ದು, ಪ್ರತಿಪಕ್ಷ ಡಿಎಂಕೆ ಅಧಿಕಾರಕ್ಕೆ ಬರುವ ಸಾಧತ್ಯೆ ಇದೆ ಎಂದು ಬಹುತೇಕ ಸಮೀಕ್ಷೆ ಹೇಳಿವೆ. ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 160 ರಿಂದ 170 ಸ್ಥಾನಗಳೊಂದಿಗೆ ಸ್ಟಾಲಿನ್ ನೇತೃತ್ವದ ಡಿಎಂಕೆ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ. ಇಂಡಿಯಟುಡೇ ಆಕ್ಸಿಸ್ ಕೂಡ ಡಿಎಂಕೆ ಪ್ರಚಂಡ ಬಹುಮತಗಳೊಂದಿಗೆ ಒಂದು ದಶಕಗಳ […]

ಮತದಾನೋತ್ತರ ಸಮೀಕ್ಷೆ: ಬಂಗಾಳದಲ್ಲಿ ದೀದಿ ಮತ್ತೆ ಮೇಲುಗೈ, ಬಿಜೆಪಿಗೆ ಹಿನ್ನಡೆ

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ವಿವಿಧ ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಹಲವು ಸಮೀಕ್ಷೆಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮತದಾರ ಈ ಬಾರಿಯೂ ಮಮತಾ ಬ್ಯಾನರ್ಜಿ ಕೈಹಿಡಿಯುವ ಸಾಧ್ಯತೆ ಇದ್ದು, ದೀದಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿವೆ. ಎಬಿಪಿ ಸಿ-ವೋಟರ್ ಸಮೀಕ್ಷೆಯಲ್ಲಿ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಗೆಲುವು ಮುನ್ಸೂಚನೆ ನೀಡಿದೆತಿಳಿಸಿದ 152 ರಿಂದ 164 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಬಿಜೆಪಿ 109 ರಿಂದ 121 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ […]

ಕೋವಿಡ್ ನಿಯಂತ್ರಣ ಕೇವಲ ಸರಕಾರದ ಜವಾಬ್ದಾರಿ ಮಾತ್ರವಲ್ಲ, ದೇಶದ ಜನರ ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ: ರಾಕೇಶ್ ಬಿರ್ತಿ

ಉಡುಪಿ: ದೇಶದಲ್ಲಿ ಕೊರೊನಾದ ಎರಡನೇ ಅಲೆಯು ಭೀಕರತೆಯನ್ನು ಸೃಷ್ಟಿಸುತ್ತಿದ್ದು, ಅನೇಕ ರಾಜ್ಯಗಳಲ್ಲಿ ಈಗಾಗಲೇ ಲಾಕ್ – ಡೌನ್ ನಂತಹ ಕಠಿಣ ನಿಯಮಗಳನ್ನು ಸರಕಾರಗಳು ಜಾರಿಗೊಳಿಸಿವೆ. ಕೋವಿಡ್ ಸೋಂಕಿತರಿಗೆ ಬೇಕಾದ ಅಗತ್ಯ ವಸ್ತುಗಳಾದ ರೆಮ್ಡಿಸಿವಿರ್, ವೆಂಟಿಲೇಟರ್ , ಲಸಿಕೆ ಗಳನ್ನು ಪೂರೈಸಲು ಸರಕಾರ ಪ್ರಯತ್ನಿಸುತ್ತಿದೆ. ಆದರೆ ಕೋವಿಡ್ ವಿರುದ್ಧ ಹೋರಾಟ ಕೇವಲ ಸರಕಾರದ ಜವಾಬ್ದಾರಿ ಮಾತ್ರವಲ್ಲ. ಕೊರೊನಾದ ಎರಡನೇ ಅಲೆಯ ಗಂಭೀರತೆಯನ್ನು ಅರಿತು ಸರಕಾರದ ಆದೇಶ ಮಾಸ್ಕ್ , ಸಾಮಾಜಿಕ ಅಂತರ, ಲಾಕ್ – ಡೌನ್  ನಿಯಮಗಳನ್ನು ಕಟ್ಟುನಿಟ್ಟಾಗಿ […]