ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ಹಾಗೂ Orane International School of Beauty & Wellness ವತಿಯಿಂದ ‘ಕೌಶಲ್ಯ 2026 – ದಿ ಸ್ಕಿಲ್ ಫೆಸ್ಟ್’ ಅಂಗವಾಗಿ ಮೆಹೆಂದಿ ವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿದೆ.
ಸೆಪ್ಟೆಂಬರ್ 19ರಂದು ನಡೆಯಲಿರುವ ಸ್ಪರ್ಧೆಯಲ್ಲಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ PUC ಮತ್ತು ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ತಮ್ಮ ಸೃಜನಶೀಲತೆ ಮತ್ತು ಮೆಹೆಂದಿ ವಿನ್ಯಾಸ ಕೌಶಲ್ಯ ಪ್ರದರ್ಶಿಸಲು ಅವಕಾಶವಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ವಿಜೇತರಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಎಲ್ಲ ಭಾಗವಹಿಸುವವರಿಗೆ ಪ್ರಮಾಣಪತ್ರವೂ ದೊರೆಯಲಿದೆ.
ಶಾಲೆಗಳು ಹಾಗೂ ಕಾಲೇಜುಗಳು ತಮ್ಮ ತಂಡಗಳನ್ನು ಪ್ರತಿನಿಧಿಗಳಾಗಿ ಕಳುಹಿಸಬಹುದಾಗಿದ್ದು, ವೈಯಕ್ತಿಕವಾಗಿಯೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ನೋಂದಣಿ ಶುಲ್ಕ ₹100 ಆಗಿದ್ದು, ಸೆಪ್ಟೆಂಬರ್ 15 ನೋಂದಣಿಗೆ ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ 8123165068 ಸಂಪರ್ಕಿಸಬಹುದು. ಕಾರ್ಯಕ್ರಮವು ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನಲ್ಲಿರುವ MSDC ಕಟ್ಟಡದಲ್ಲಿ ನಡೆಯಲಿದೆ.















