ಮಣಿಪಾಲ: MSDC – Orane International ವತಿಯಿಂದ ಸೆ.19 ರಂದು ‘ಬ್ಯೂಟಿ & ವೆಲ್‌ನೆಸ್’ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದೊಳ್ಳೆ ಚಾನ್ಸ್!

ಮಣಿಪಾಲ: MSDC ಹಾಗೂ Orane International School of Beauty & Wellness ವತಿಯಿಂದ ಸೌಂದರ್ಯ ಮತ್ತು ಕ್ಷೇಮ ಕ್ಷೇತ್ರದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ‘Beauty & Wellness’ ಸ್ಪರ್ಧೆಯನ್ನು ಸೆ.19ರಂದು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ನೈಲ್ ಆರ್ಟ್, ಆರ್ಗ್ಯಾನಿಕ್ ಫೇಸ್ ಪ್ಯಾಕ್/ಮಾಸ್ಕ್ ಅಪ್ಲಿಕೇಶನ್ ಹಾಗೂ ಮೆಹಂದಿ ಡಿಸೈನಿಂಗ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ನೈಲ್ ಆರ್ಟ್ ಸ್ಪರ್ಧೆಯಲ್ಲಿ ಸ್ಪರ್ಧಾರ್ಥಿಗಳು ತಮ್ಮದೇ ಮಾದರಿ ಹಾಗೂ ನೈಲ್ ಆರ್ಟ್ ಉತ್ಪನ್ನಗಳು ಮತ್ತು ಉಪಕರಣಗಳನ್ನು ತರಬೇಕಾಗಿದೆ. ಆರ್ಗ್ಯಾನಿಕ್ ಫೇಸ್ ಪ್ಯಾಕ್ ಸ್ಪರ್ಧೆಗೆ ವಾಲಂಟಿಯರ್ […]
ಮಣಿಪಾಲ ಎಂಎಸ್ ಡಿಸಿ-Orane International ವತಿಯಿಂದ ಸೆ.19ರಂದು ಮೆಹೆಂದಿ ವಿನ್ಯಾಸ ಸ್ಪರ್ಧೆ: ಭಾಗವಹಿಸಿ, ಗೆಲ್ಲಿರಿ ಆಕರ್ಷಕ ಬಹುಮಾನ

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ಹಾಗೂ Orane International School of Beauty & Wellness ವತಿಯಿಂದ ‘ಕೌಶಲ್ಯ 2026 – ದಿ ಸ್ಕಿಲ್ ಫೆಸ್ಟ್’ ಅಂಗವಾಗಿ ಮೆಹೆಂದಿ ವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿದೆ. ಸೆಪ್ಟೆಂಬರ್ 19ರಂದು ನಡೆಯಲಿರುವ ಸ್ಪರ್ಧೆಯಲ್ಲಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ PUC ಮತ್ತು ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ತಮ್ಮ ಸೃಜನಶೀಲತೆ ಮತ್ತು ಮೆಹೆಂದಿ ವಿನ್ಯಾಸ ಕೌಶಲ್ಯ ಪ್ರದರ್ಶಿಸಲು ಅವಕಾಶವಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ವಿಜೇತರಿಗೆ […]
ಸ್ವಚ್ಛ ಉಡುಪಿ – ಹಸಿರು ಉಡುಪಿ’ ಅಭಿಯಾನಕ್ಕೆ CREDAI ಉಡುಪಿ ಹಾಗೂ ACCEAಯಿಂದ ಮತ್ತೊಂದು ಮಹತ್ವದ ಕೊಡುಗೆ

ಉಡುಪಿ: ನಿರ್ಮಾಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ CREDAI ಉಡುಪಿ ಹಾಗೂ Association of Consulting Civil Engineers and Architects (ACCEA), Udupi ಸಂಸ್ಥೆಗಳು ಉಡುಪಿ ನಗರವನ್ನು ಇನ್ನಷ್ಟು ಸ್ವಚ್ಛ, ಹಸಿರು ಮತ್ತು ಸುಂದರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯೊಂದಿಗೆ ಕೈಜೋಡಿಸಿವೆ. ಇತ್ತೀಚೆಗೆ ಪರಿಸರ ದಿನಾಚರಣೆಯ ಅಂಗವಾಗಿ ಅಜ್ಜರಕಾಡಿನ ಸಸ್ಯಕಾಶೆಯಲ್ಲಿ ಗಿಡ ನೆಡುವ ಮೂಲಕ ‘ಸ್ವಚ್ಛ ಉಡುಪಿ – ಹಸಿರು ಉಡುಪಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನದ ಮುಂದುವರಿದ ಭಾಗವಾಗಿ, ಇಂದು ಇಂಜಿನಿಯರ್ಸ್ […]
3 ತಿಂಗಳ ಮಗುವಿನ ಯಕೃತ್ತಿನ ಕ್ಯಾನ್ಸರ್ ಗೆಡ್ಡೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ:ಮಗು ಕ್ಯಾನ್ಸರ್ ಮುಕ್ತ!

ಮಣಿಪಾಲ: ಕೇವಲ ಮೂರು ತಿಂಗಳ ಹಸುಗೂಸಿನ ಯಕೃತ್ತಿನಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಕ್ಯಾನ್ಸರ್ ಗೆಡ್ಡೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದೆ. ಚಿಕಿತ್ಸೆಯ ಬಳಿಕ ಮೂರು ವರ್ಷಗಳಿಗೂ ಹೆಚ್ಚು ಕಾಲದ ತಪಾಸಣೆಯಲ್ಲೂ ಯಾವುದೇ ಕ್ಯಾನ್ಸರ್ ಲಕ್ಷಣ ಕಂಡುಬಂದಿಲ್ಲ. ಮಗು ಇದೀಗ ಆರೋಗ್ಯವಾಗಿದ್ದು, ವಯೋಸಹಜ ಬೆಳವಣಿಗೆ ಹೊಂದಿದೆ. ಮಗುವಿಗೆ ಯಕೃತ್ತು ದೊಡ್ಡದಾಗಿರುವುದು ಹಾಗೂ ಯಕೃತ್ತಿನ ಕ್ಯಾನ್ಸರ್‌ನ ಪ್ರಮುಖ ಸೂಚಕವಾದ ಆಲ್ಫಾ-ಫೆಟೊಪ್ರೊಟೀನ್ (AFP) ಮಟ್ಟ ಹೆಚ್ಚಿರುವುದು ಪತ್ತೆಯಾಗಿತ್ತು. ಪರೀಕ್ಷೆಯಲ್ಲಿ ಹೆಪಟೊಬ್ಲಾಸ್ಟೋಮಾ ಎಂಬ ಅಪರೂಪದ ಯಕೃತ್ತಿನ ಕ್ಯಾನ್ಸರ್ […]
ಎ.ಜಿ. ಅಸೋಸಿಯೇಟ್ಸ್ ಉಡುಪಿ ವತಿಯಿಂದ ಎಂಜಿನಿಯರ್ ಡೇ ಆಚರಣೆ , ಸನ್ಮಾನ

ಎ.ಜಿ. ಅಸೋಸಿಯೇಟ್ಸ್ ಉಡುಪಿ ವತಿಯಿಂದ ಎಂಜಿನಿರ‍್ಸ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಎಂಜಿನಿರ‍್ಸ್ ದಿನಾಚರಣೆ ವಿಶೇಷ ಕಾರ್ಯಕ್ರಮವು ಬ್ರಹ್ಮಗಿರಿ ಸರ್ಕಲ್ ಸಮೀಪದ ನಾಯರ್‌ಕೆರೆ ಎ.ಜಿ. ಅಸೋಸಿಯೇಟ್ಸ್ನ ಎಜಿಎ ಕ್ಯಾಂಟಿಲೀವರ್‌ನಲ್ಲಿ ಮಂಗಳವಾರ ನಡೆಯಿತು.ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನಿರ್ದೇಶಕ ರಾಹುಲ್ ಕಲ್ಕೂರ ಹಾಗೂ ಎಸ್‌ಎಂವಿಟಿಯ ಸಿವಿಲ್ ಎಂಜಿನಿಯರ್ ಮತ್ತು ತರಬೇತಿ ಪ್ಲೇಸ್‌ಮೆಂಟ್ ಮುಖ್ಯಸ್ಥ ಎಂಜಿನಿಯರ್ ರೋಶನ್ ಎಸ್. ಕೋಟ್ಯಾನ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್‌ಎಂವಿಟಿಯ ಸಿವಿಲ್ ಎಂಜಿನಿಯರ್ ಮತ್ತು ತರಬೇತಿ ಪ್ಲೇಸ್‌ಮೆಂಟ್ ಮುಖ್ಯಸ್ಥ ಎಂಜಿನಿಯರ್ ರೋಶನ್ ಎಸ್. […]