ಮಣಿಪಾಲ MSDC ಯಲ್ಲಿ ಮೆಹೆಂದಿ ಮತ್ತು ನೇಲ್ ಆರ್ಟ್ ಕ್ರಿಯೇಟಿವ್ ಕ್ಯಾಂಪ್‌, ಆಸಕ್ತಿ ಇದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಉಡುಪಿ: ಸೌಂದರ್ಯ ಹಾಗೂ ಸೃಜನಾತ್ಮಕ ಕೌಶಲ್ಯಗಳನ್ನು ಉತ್ತೇಜಿಸಲು Manipal Skill Development Center (MSDC) ಮತ್ತು Orane International ಸಂಯುಕ್ತವಾಗಿ “Mehandi & Nail Art Creative Camp” ಎಂಬ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.

ಈ ಶಿಬಿರದಲ್ಲಿ ಕ್ಲಾಸಿಕ್ ನೇಲ್ ಆರ್ಟ್, ಮೆಹೆಂದಿ ಡಿಸೈನ್, ಜೆಲ್ ನೇಲ್ ಆರ್ಟ್ ಹಾಗೂ ಸೀಸನಲ್ ನೇಲ್ ಆರ್ಟ್ ಸೇರಿದಂತೆ ವಿವಿಧ ಕಲಾತ್ಮಕ ತರಬೇತಿಗಳನ್ನು ನೀಡಲಾಗುತ್ತದೆ. ಸೌಂದರ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಶಿಬಿರವು ಏಪ್ರಿಲ್ 20ರಿಂದ ಏಪ್ರಿಲ್ 30ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ. 8ನೇ ತರಗತಿ ಮತ್ತು ಅದರ ಮೇಲಿನ ವಿದ್ಯಾರ್ಥಿಗಳು ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ 8123165069 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.