ಈ ವರ್ಷದ ಪವರ್ ಪರ್ಬಕ್ಕೆ ಸಂಭ್ರಮದ ತೆರೆ

ಉಡುಪಿ: ಕಳೆದ ಮೂರು ದಿನಗಳಿಂದ ಕಳೆಗಟ್ಟಿದ್ದ ಬೀಡಿನಗುಡ್ಡೆ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಪವರ್ ಪರ್ಬದ ಸಮಾರೋಪ ಸಮಾರಂಭವು ಭಾನುವಾರದಂದು ಜರುಗಿತು.

ಸಮಾರೋಪ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕನ್ನಡ ಚಿತ್ರನಟ ಶೈನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಚಾಲಕಿ ಶಿಲ್ಪಾ ಶೆಟ್ಟಿ ವರದಿ ವಾಚಿಸಿದರು. ಪೂರ್ಣಿಮಾ ಶೆಟ್ಟಿ ಪ್ರಾರ್ಥಿಸಿದರು. ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ ಸ್ವಾಗತಿಸಿದರು. ತನುಜಾ ಮಾಬೆನ್ ಹಾಗೂ ಸಾಧನಾ ಕಿಣಿ ನಿರೂಪಿಸಿದರು.  ಅರ್ಚನಾ ರಾವ್ ವಂದಿಸಿದರು.

ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಮೂರೂ ದಿನಗಳಲ್ಲಿ ಮಹಿಳಾ ಸಶಕ್ತೀಕರಣದ ಅನಾವರಣವಾಯಿತು. ನೂರಕ್ಕೂ ಅಧಿಕ ಸ್ಟಾಲ್ ಗಳಲ್ಲಿ ಮಹಿಳೆಯರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.

ಮಕ್ಕಳಿಗಾಗಿ ವಿಶೇಷ ಆಟಗಳನ್ನು ಏರ್ಪಡಿಸಲಾಗಿತ್ತು. ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನರಂಜಿಸಿದವು.

ಜನರು ವಸ್ತುಪ್ರದರ್ಶನ ಮಳಿಗೆಗಳಿಂದ ವಸ್ತುಗಳನ್ನು ಖರೀದಿಸಿದರು ಹಾಗೂ ವಿವಿಧ ಖಾದ್ಯಾನ್ನಗಳನ್ನ ಸವಿದರು.