udupixpress
Home Trending ಮೀನುಗಾರರಿಗೆ ವಿವಿಧ ಸೌಲಭ್ಯ  ಓದಗಿಸುವ ಕುರಿತು ಸಚಿವರ ಅಧ್ಯಕ್ಚತೆಯಲ್ಲಿ ಸಭೆ

ಮೀನುಗಾರರಿಗೆ ವಿವಿಧ ಸೌಲಭ್ಯ  ಓದಗಿಸುವ ಕುರಿತು ಸಚಿವರ ಅಧ್ಯಕ್ಚತೆಯಲ್ಲಿ ಸಭೆ

ಕಾರವಾರ: ಮೀನುಗಾರರ ಹಾಗೂ ಮೀನುಗಾರ ಮಹಿಳೆಯರ ಸಮಸ್ಯೆಗಳ ಕುರಿತು  ಶೂನ್ಯ ಬಡ್ಡಿದರ ಸಾಲ  ಹಾಗೂ ಕಿಸಾನ ಕಾರ್ಡ ಯೋಜನೆಗೆ ಸಂಭಂದಿಸಿದಂತೆ ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ ಶ್ರೀ ಕೋಟಾ ಶ್ರಿನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಯಿತು.
ಶೇಕಡಾ ಶೂನ್ಯ ಬಡ್ಡಿದರದಲ್ಲಿ ಎಲ್ಲ ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಮೀನುಗಾರರಿಗೆ ಸರ್ಕಾರ ಒದಗಿಸುತ್ತಿರುವ ಯೋಜನೆಗಳ ಕುರಿತು ಮಾಹಿತಿಯನ್ನು ತಲುಪಿಸಬೇಕು. ಸಾಲ ಪಡೆಯಲು ಅರ್ಹರಾಗಿರುವವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅರ್ಜಿಯನ್ನು ವಿಲೇವಾರಿ ಮಾಡಿ ಸಾಲ ಒದಗಿಸಬೇಕು.ಎಂದು ಸಚಿವರು  ಬ್ಯಾಂಕ್ ಅಧಿಕಾರಿಗಳಿಗೆ ಆದೇಶಿಸಿದರು.
ಉತ್ತರ ಕನ್ನಡ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ, ದಕ್ಷಿಣ ಕನ್ನಡ ಫೇಡರೇಶನ್ ಅಧ್ಯಕ್ಷ ಯಶ್ ಪಾಲ ಸುವರ್ಣ, ಜಿಲ್ಲಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.
 ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಮೀನುಗಾರಿಕೆ ಸಹಕಾರಿ ಸಂಘದ ಪದಾಧಿಕಾರಿಗಳೊಂದಿಗೆ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ ಅವರೊಂದಿಗೆ ಇಲಾಖೆ ಪ್ರಗತಿ ಕುರಿತು ಸಭೆ ನಡೆಸಬೇಕು.
ಮೀನುಗಾರ ಮಹಿಳೆಯರ ಶೂನ್ಯ ಬಡ್ಡಿದರ ಸಾಲದ ಲಾಭ ಪಡೆಯಲು ಕಾರವಾರ ಅಂಕೋಲಾ ತಾಲೂಕಿನಲ್ಲಿ  2ಸಾವಿರ ಅರ್ಜಿಗಳು ಹಾಗೂ ಜಿಲ್ಲೆಯಲ್ಲಿ 11 ಸಾವಿರ ಅರ್ಜಿಗಲು ಬಾಕಿ ಇದ್ದು, ಎರಡು ತಿಂಗಳಿನಲ್ಲಿ ಅವುಗಳನ್ನು ವಿಲೇವಾರಿ ಮಾಡಬೇಕು. ಅಲ್ಲದೆ ಸರ್ಕಾರ ಮೀನುಗಾರರ ಅನುಕೂಲಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸೌಲಭ್ಯ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು ಸಚಿವರು ಅಧಿಕಾರಿಗಳಿಗೆ ಆದೇಶಿಸಿದರು.
error: Content is protected !!