ಹಿರಿಯಡ್ಕ: ಶನಿವಾರದಂದು ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ನಾಥ್ ಹೆಗ್ಡೆಯವರ ನೇತೃತ್ವದಲ್ಲಿ ಕ್ಲಬ್ಬಿನ ಸದಸ್ಯರು ಹಿರಿಯಡ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಮಾಜಿ ಜಿಲ್ಲಾ ಗವರ್ನರ್ ಎಂ.ಜೆ.ಎಫ್ ಲಯನ್ ವಿಶ್ವನಾಥ್ ಶೆಟ್ಟಿಯವರು ನೀಡಿದ ಮಾತ್ರೆಗಳು, ಟಾನಿಕ್, ಸಿರಪ್, ಮುಲಾಮ್ ಮತ್ತು ಇತರ ಔಷಧೀಯ ಪರಿಕರಗಳನ್ನು ಕ್ಲಬ್ಬಿನ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ಸತ್ಯಶಂಕರ್ ಸಿ ಎಚ್ ರವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಲಯನ್ ವಿಶ್ವನಾಥ್ ಶೆಟ್ಟಿಯವರು ಮಾತನಾಡಿ, ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಹಳಷ್ಟು ಕೊಡುಗೆಗಳನ್ನು ಕೊಟ್ಟಿದ್ದು, ಬಡ ರೋಗಿಗಳಿಗೆ ಅದನ್ನು ತಲಪಿಸುವ ಕಾರ್ಯವನ್ನು ಇಲ್ಲಿನ ಸಿಬ್ಬಂದಿ ವರ್ಗದವರು ಮಾಡುತ್ತಿದ್ದು ಅವರ ಸೇವಾ ಮನೋಭಾವನೆಯನ್ನು ಪ್ರಶಂಸೆ ಮಾಡುತ್ತೇನೆ ಎಂದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸತ್ಯಶಂಕರ್ ಲಯನ್ಸ್ ಕ್ಲಬ್ ನ ಸಹಕಾರಕ್ಕೆ ಸಂತಸ ವ್ಯಕ್ತ ಪಡಿಸಿದರು.
ಲಯನ್ಸ್ ಸದಸ್ಯರಾದ ಹರೀಶ್ ಹೆಗ್ಡೆ, ಗಂಗಾಧರ್ ಶೆಟ್ಟಿಗಾರ್, ವಸಂತ್ ಶೆಟ್ಟಿ, ಫಾರ್ಮಸಿ ವಿಭಾಗದ ಶ್ರೀಮತಿ ಜಿ ಶೆಟ್ಟಿಗಾರ್, ಹಿರಿಯ ಆರೋಗ್ಯ ಸಹಾಯಕಿ ಅರ್ಚನಾ, ಶ್ಯಾಮಲಾ ಮತ್ತು ಕೇಂದ್ರದ ಸಿಬ್ಬಂದಿ ನಾಗವೇಣಿ ಮುಂತಾದವರು ಹಾಜರಿದ್ದರು.
ಸತ್ಯಾನಂದ ನಾಯಕ್ ಸ್ವಾಗತಿಸಿದರು. ಅರ್ಚನಾ ವಂದಿಸಿದರು.