ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರ ಮತ್ತೆ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಎರಡನೆ ಮುಗುವನ್ನು ಬರಮಾಡಿಕೊಂಡ ಶಿಲ್ಪಾ ಶೆಟ್ಟಿ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಪುತ್ರಿಯ ಮೇಲಿರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡರು.
ಫೆ.15ರಂದು ಶಿಲ್ಪ ಮತ್ತು ರಾಜ್ ಕುಂದ್ರ ಮುದ್ದಾದ ಹೆಣ್ಣು ಮಗುವನ್ನು ಸ್ವಾಗತ ಮಾಡಿಕೊಂಡರು. ‘ಮುದ್ದಾದ ಮಗುವಿಗೆ ಸಮಿತಾ ಶೆಟ್ಟಿ ಕುಂದ್ರ ಎಂದು ಹೆಸರಿಟ್ಟಿದ್ದೇವೆ, ನಮ್ಮ ಪ್ರಾರ್ಥನೆ ದೇವರಿಗೆ ತಲುಪಿದ್ದು, ನಮ್ಮ ಪುಟ್ಟ ದೇವತೆ ಶಮಿಶಾ ಶೆಟ್ಟಿ ಆಗಮನವನ್ನು ಘೋಷಿಸಲು ನಾವು ರೋಮಂಚನಗೊಂಡಿದ್ದೇವೆ ಎಂದು ನಟಿ ಶಿಲ್ಪಾ ಶೆಟ್ಟಿ ತನ್ನ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ದಂಪತಿಗೆ ಈಗಾಗಲೆ ಒಬ್ಬ ಮಗನಿದ್ದಾನೆ. 2012ರಲ್ಲಿ ಶಿಲ್ಪಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ವಿಹಾನ್ ಎಂದು ನಾಮಕರಣ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ 2009ರಲ್ಲಿ ಹಸೆಮಣೆ ಏರಿದ್ದರು.