ಮತದಾನ ಜಾಗೃತಿ ವಸ್ತು ಪ್ರದರ್ಶನ ಉದ್ಘಾಟನೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಭಾಂಗಣದ ಬಳಿ  ಮತದಾನದ ಮಹತ್ವ ಕುರಿತಂತೆ ಆಯೋಜಿಸಿರುವ 3 ದಿನಗಳ ವಸ್ತುಪ್ರದರ್ಶನವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ಉದ್ಘಾಟಿಸಿದರು.

ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸುವ ಆಕರ್ಷಕ ವಸ್ತುಪ್ರದರ್ಶನ ಕಾರ್ಯಕ್ರಮ ಇದಾಗಿದ್ದು, ಸೀ ವಿಜಿಲ್, ಹಿರಿಯ ನಾಗರೀಕರಿಗೆ ಮತದಾನ ಸಂದರ್ಭ ದೊರೆಯುವ ಸೌಲಭ್ಯಗಳು, ಮತದಾರರ ಸಹಾಯವಾಣಿ , ಆಮಿಷಗಳಿಗೆ ಬಲಿಯಾಗದಂತೆ, ಮುಂತಾದ ವಿಷಯಗಳ ಬಗ್ಗೆ ವಸ್ತುಪ್ರದರ್ಶನ ಕಾರ್ಯಕ್ರಮ ಮಾಹಿತಿ ನೀಡಲಿದೆ.

ಚುನಾವಣಾ ವೆಚ್ಚ ವೀಕ್ಷಕ ಸಚಿನ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಉಪಸ್ಥಿತರಿದ್ದರು.