ಉಡುಪಿ: ಪ್ರಧಾನಿ ನರೇಂದ್ರ ಮೋದೀಜಿಯವರು ಸಾಂವಿಧಾನಿಕ ಹುದ್ದೆಯಲ್ಲಿ ನಿರಂತರವಾಗಿ 25 ವರ್ಷಗಳ ಕಾಲ ದೇಶಕ್ಕೆ ನೀಡಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಪಕ್ಷವು ದೇಶದದ್ಯಾoತ “ಸೇವಾ ಸಂಕಲ್ಪ ಅಭಿಯಾನ ” ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಗಿದೆ.
ಅದರಂತೆ ಜಿಲ್ಲಾ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ವತಿಯಿಂದ ಉಡುಪಿ ಕೊಳಲಗಿರಿ , “ಸ್ವರ್ಗ ಆಶ್ರಮ” ದ ಅಸಹಾಯಕ ಬಂಧುಗಳಿಗೆ ಮೋದೀಜಿ ಯವರ ಹೆಸರಿನಲ್ಲಿ ಮದ್ಯಾಹ್ನದ ಉತ್ತಮ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.
ಜಿಲ್ಲಾ ಕೈಗಾರಿಕಾ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಸದಾನಂದ ಪ್ರಭು ರವರು ಎಲ್ಲರನ್ನು ಸ್ವಾಗತಿಸುತ್ತ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಆಶ್ರಮದ ಸಂಚಾಲಕರಾದ ಡಾ. ಶಶಿಕಿರಣ್ ರವರು ಆಶ್ರಮದ ಸ್ಥಾಪನೆಯ ಹಿನ್ನಲೆ ಯನ್ನು ತಿಳಿಸುತ್ತಾ ಇಂತಹ ಕಾರ್ಯಗಳಿಗೆ ಸಮಾಜದಿಂದ ಬೆಂಬಲ ದೊರೆಯಬೇಕು ಆಗ ನಮ್ಮ ಉದ್ದೇಶ ಪೂರ್ಣ ವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರ್ ನವೀನ್ ಶೆಟ್ಟಿಯವರು ಮಾತನಾಡುತ್ತಾ ಡಾ. ಶಶಿಕಿರಣ್ ರವರ ತಂಡದ ಸೇವಾ ಮನೋಭಾವನೆ ಯನ್ನು ಶ್ಲಾಘನೆ ಮಾಡಿದರು. ಇಂತಹ ವ್ಯಕ್ತಿಗಳಿಂದಲೇ ದೇಶದ ಅಭಿವೃದ್ಧಿ ಆಗುತ್ತದೆ. ಸಮಾಜದ ಕಟ್ಟ ಕಡೆಯ ಅಸಹಾಯಕರಿಗೆ ನಾವೆಲ್ಲರೂ ಸದಾ ಸ್ಪಂದನೆ ನೀಡ ಬೇಕು ಎಂದು ಕರೆ ನೀಡಿದರು ಹಾಗೂ ಬಿಜೆಪಿ ಪಕ್ಷವು ಈ ನಿಟ್ಟಿನಲ್ಲಿ ಸದಾ ತಮ್ಮ ಜತೆ ಇರುತ್ತದೆ ಎಂದು ತಿಳಿಸಿದರು. ನಂತರ ಅತಿಥಿ ಗಳು ಅಸಹಾಯಕ ಬಂಧುಗಳಿಗೆ ಊಟವನ್ನು ಸ್ವತಃ ಬಡಿಸಿ ಅವರ ಜತೆ ಎಲ್ಲರೂ ಭೋಜನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಪ್ರಕೋಷ್ಠ ಸಹ ಸಂಚಾಲಕರು ರವಿ ಆಚಾರ್ಯ, ಸಂಯೋಜಕರಾದ ಡಿಲ್ಲೇಶ್ ಶೆಟ್ಟಿ, ವಿಜಯ ಕೊಡವೂರು, ಪ್ರಕೋಷ್ಠ ಪದಾಧಿಕಾರಿಗಳಾದ ಶಂಕರ್ ಕುಲಾಲ್, ಉಮೇಶ್ ಶೆಟ್ಟಿ, ಪ್ರಸಾದ್ ಮಲ್ಯ, ಸಂದೀಪ್ ನಾಯಕ್, ರಮಾನಂದ ಪ್ರಭು, ಸತೀಶ್ ಗೌಡ, ಕೃಷ್ಣ ಮೂರ್ತಿ, ಸುರೇಶ್, ಸಂಸ್ಥೆಯ ಸಿಬ್ಬಂದಿ ಗಳು ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.















