ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೈಕೆ

ಡುಪಿ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಜೀವನದ ಕೊನೆಯ ಹಂತದಲ್ಲಿರುವವರಿಗೆ ನೋವುರಹಿತ ಹಾಗೂ ಗೌರವಯುತ ಅಂತಿಮ ದಿನಗಳನ್ನು ಕಳೆಯಲು ಮಾಹೆ ವಿಶ್ವವಿದ್ಯಾಲಯದ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಟೆಟ್ ಸೆಂಟರ್ (ಎಂಎಚ್‌ಆರ್‌ಸಿ) ಉಚಿತವಾಗಿ ಉತ್ಕೃಷ್ಟ ಉಪಶಾಮಕ ಆರೈಕೆ ಸೇವೆ ಒದಗಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೈಕೆ ನೀಡಲಾಗಿದ್ದು, 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಲಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]
ಉಡುಪಿಯಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದ ಪುರಭವನದಲ್ಲಿ ‘ವಿಕಸಿತ ಭಾರತ ಸಂಕಲ್ಪ ಸಭೆ’ ಹಾಗೂ ‘ಸೇವಾ ಜ್ಯೋತಿ ಯಾತ್ರೆ’ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಜ್ಯೋತಿ ಬೆಳಗಿಸಿದ ಕಾರ್ಯಕ್ರಮದ ನೇರ ಪ್ರಸಾರವನ್ನು ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವೀಕ್ಷಿಸಿದರು. ಬಳಿಕ ಪಕ್ಷದ ಪ್ರಮುಖರು ಸೇವಾ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ […]
ರಾಜ್ಯದಲ್ಲಿ ಇನ್ನು ಹಾಫ್ ಹೆಲ್ಮೆಟ್ ಬಳಕೆ ನಿಷೇಧ: ಸಾರಿಗೆ ಇಲಾಖೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಸವಾರರು ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್ ಬದಲಿಗೆ ಬಿಐಎಸ್ ಅಥವಾ ಐಎಸ್‌ಐ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವ ಹೆಲ್ಮೆಟ್‌ಗಳನ್ನು ಮಾತ್ರ ಬಳಸಬೇಕು ಎಂದು ಇಲಾಖೆ ಸೂಚಿಸಿದೆ. ನಿಯಮ ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ, ಹಾಫ್ ಹೆಲ್ಮೆಟ್ ತಯಾರಿಸುವ ಹಾಗೂ ಮಾರಾಟ ಮಾಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು […]
ಅ.11ರಂದು “ಸಂಗೊಳ್ಳಿ ರಾಯಣ್ಣ ಪುರಸ್ಕಾರ ಸಮಾರಂಭ”ರಂಗಕರ್ಮಿ ರವಿರಾಜ್ ಎಚ್.ಪಿ. ಅವರಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರ ಪ್ರದಾನ

ಉಡುಪಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ಆಶ್ರಯದಲ್ಲಿ ಸಂಗೊಳ್ಳಿ ರಾಯಣ್ಣ ಪುರಸ್ಕಾರ ಸಮಾರಂಭ ಅ. 11ರಂದು ಸಂಜೆ 4.30ಕ್ಕೆ ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗದ ಐವೈಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿ ಖ್ಯಾತ ರಂಗಕರ್ಮಿ ರವಿರಾಜ್ ಎಚ್.ಪಿ. ಅವರಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಜೆ 4.30ರಿಂದ 5ರವರೆಗೆ ಖ್ಯಾತ ಗಾಯಕರಾದ ರಾಜೇಶ್ ಶಾನ್‌ಭೋಗ್ ಹಾಗೂ ಬಾರಕೂರು (ಪಿ. […]
ನವರಾತ್ರಿ ಹಬ್ಬಕ್ಕೆ ಶೃಂಗೇರಿಗೆ ಬರೋ ಪ್ಲ್ಯಾನ್ ಇದ್ಯಾ? ಶೃಂಗೇರಿಯಲ್ಲಿ ನವರಾತ್ರಿಗೆ ಈ ಸಲ ಏನೇನಿದೆ ಸ್ಪೆಷಲ್?

ಶೃಂಗೇರಿ: ಶ್ರೀ ಶಾರದಾ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶೃಂಗೇರಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಕ್ಟೋಬರ್ 11ರಿಂದ 19ರವರೆಗೆ ಸಂಚಿಯ ಬೀದಿ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ನಡೆಯುವ ಉತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಅಕ್ಟೋಬರ್ 11ರಂದು ಅಡ್ಡಗದ್ದೆಯಿಂದ ಉತ್ಸವ ಆರಂಭವಾಗಲಿದ್ದು, 12ರಂದು ಮೆಣಸೆ, 13ರಂದು ಕೋಟಗೋಡು, 14ರಂದು ವಿದ್ಯಾರಣ್ಯಪುರ, 15ರಂದು ಧರಿಕವಲಸೆ, 16ರಂದು ನೆಮ್ಮಾರು, 17ರಂದು ಬೇಗಾರು, 18ರಂದು ಕಿಗ್ಗಾ ಹಾಗೂ 19ರಂದು ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಸವ ನಡೆಯಲಿದೆ. […]