ಪ್ರಾಚ್ಯ ವಸ್ತು ಸಂಗ್ರಾಹಕಾರರಾದ ಕುಕ್ಕುಂದೂರಿನ ಕೆ. ಮಂಜುನಾಥ್ ಇವರ ಹವ್ಯಾಸಿ ಸಂಗ್ರಹಕ್ಕೆ ಎಂದಿನಂತೆ ಈ ಬಾರಿಯೂ ಕೂಡಾ ಹೊಸ ಮಾದರಿ ಹಾಗೂ ವಿನ್ಯಾಸದ ರೂಪಾಯಿ 2, 5, 10 ಮತ್ತು ಭಾರತದ ನಾಣ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಲಾವಣೆಗೆ ಬಿಡುವಂತಹ ರೂ. 20ರ ನಾಣ್ಯವನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ.
ಈ ನಾಣ್ಯವು ಸದ್ಯದಲ್ಲೇ ಸಾರ್ವಜನಿಕರಿಗೆ ಚಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ಬಿಡುತ್ತದೆ. ಮೂಲತಃ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ತನ್ನ ಹವ್ಯಾಸಿ ಸಂಗ್ರಹದಲ್ಲಿ ಈ ಮೊದಲು ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿದ ಎಲ್ಲಾ ನಾಣ್ಯ ಮತ್ತು ನೋಟುಗಳನ್ನು ಹಾಗೂ ವಿದೇಶಿದ ಕರೆನ್ಸಿಗಳನ್ನು ಹಾಗೂ ಬಲು ಅಪರೂಪದ ಆರ್ಬಿಐ ಈ ಮೊದಲು ಬಿಡುಗಡೆ ಮಾಡಿರುವ ರೂ 10, 20, 25, 50, 60, 75, 100, 125, 150, 200, 250, 500, 1000 ಮುಖಬೆಲೆಯ ವಿಶೇಷ ನಾಣ್ಯಗಳು ಕೂಡಾ ಇವರ ಸಂಗ್ರಹದಲ್ಲಿರುವುದು ಬಲು ವಿಶೇಷ. ಇವಲ್ಲದೆ ರಾಜ ಮಹಾರಾಜರುಗಳ, ಬ್ರಿಟಿಷ್, ಮೊಘಲರ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳು ಕೂಡಾ ಇವರ ಸಂಗ್ರಹದಲ್ಲಿದೆ. ಮುಂದಿನ ಪೀಳಿಗೆಗೆ ನಮ್ಮ ಇತಿಹಾಸದ ಬಗ್ಗೆ ಮಾಹಿತಿ ನೀಡುವ ದಿಸೆಯಲ್ಲಿ ತನ್ನಂತಯೇ ನಾಣ್ಯ ಸಂಗ್ರಹದ ಹವ್ಯಾಸವಿರುವ ಶಾಲಾ ಮಕ್ಕಳಿಗೆ ನಾಣ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.