ಉದ್ಯೋಗಾಧಾರಿತ ಕೋರ್ಸ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಸುಂದರ ಭವಿಷ್ಯ ಕಟ್ಟಿಕೊಡುತ್ತೆ ‘ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್’: ಇದೀಗ ಶುರುವಾಗಿದೆ ಪ್ರವೇಶಾತಿ

ಮಣಿಪಾಲ: ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶ ಶುರುವಾಗಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಪರಂಪರೆ ಹೊಂದಿರುವ ಈ ಸಂಸ್ಥೆ, ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಭವಿಷ್ಯದ ಸುಂದರ ದಾರಿ ತೋರಿಸುತ್ತಿದೆ.

1985ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಎಐಸಿಟಿಇ ಅನುಮೋದನೆ ಹೊಂದಿದ್ದು ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಅಂಗಸಂಸ್ಥೆಯಾಗಿದೆ.

ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ಪಠ್ಯಕ್ರಮ, ಅನುಭವೀ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳು ಸಂಸ್ಥೆಯ ವಿಶೇಷತೆಯಾಗಿವೆ.

ಯಾವ ಯಾವ ಕೋರ್ಸ್ ಗಳಿವೆ?

ಸಂಸ್ಥೆಯಲ್ಲಿ ಆಟೋಮೊಬೈಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್, ಪ್ರಿಂಟಿಂಗ್ ಟೆಕ್ನಾಲಜಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಕ್ಲೌಡ್ ಕಂಪ್ಯೂಟಿಂಗ್ & ಬಿಗ್ ಡೇಟಾ ಸೇರಿದಂತೆ ವಿವಿಧ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡಲಾಗುತ್ತಿದೆ.

ಎಸ್‌ಎಸ್‌ಎಲ್‌ಸಿ ಉತ್ತೀ⁹ರ್ಣರು ಹಾಗೂ ಪಿಯುಸಿ ಪಾಸ್/ಫೇಲ್ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಲಾಗಿದೆ.

ಇಲ್ಲಿದೆ ಅತ್ಯುತ್ತಮ ಸೌಲಭ್ಯಗಳು: ಪಿಯುಸಿ (ಸೈನ್ಸ್) ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ದ್ವಿತೀಯ ವರ್ಷದ ಲ್ಯಾಟರಲ್ ಎಂಟ್ರಿ ಸೌಲಭ್ಯವೂ ಲಭ್ಯವಿದೆ.

ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಪ್ರಯೋಗಾಲಯಗಳು, ಆಧುನಿಕ ತರಗತಿ ಕೊಠಡಿಗಳು, ವಸತಿ ನಿಲಯ, ಕ್ರೀಡಾ ಸೌಲಭ್ಯಗಳು ಹಾಗೂ ಉತ್ತಮ ಪ್ಲೇಸ್‌ಮೆಂಟ್ ಮಾರ್ಗದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ಇತ್ತೀಚಿನ ಶೈಕ್ಷಣಿಕ ಸಾಧನೆಯಲ್ಲಿ, 2023-24ನೇ ಬ್ಯಾಚ್‌ನ 37 ವಿದ್ಯಾರ್ಥಿಗಳು ಹಾಗೂ 2024-25ನೇ ಬ್ಯಾಚ್‌ನ 60 ವಿದ್ಯಾರ್ಥಿಗಳು ನೇರವಾಗಿ ಎಂಐಟಿ ಬಿ.ಟೆಕ್ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.

ಪ್ರವೇಶಾತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Kantharaj A.N – 98447 29291Dr Ganesha A. – 94805 75730Umesh Shettigar – 94807 32223Sahana R Prabhu – 78922 00610