ಮಣಿಪಾಲ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಮಣಿಪಾಲ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಮಣಿಪಾಲದ ನಿರ್ಮಿತಿ ಕೇಂದ್ರದಲ್ಲಿ ಆಯೋಜಿಸಿದ್ದ ‘ಸಲಾಂ ಕಲಾಂ’ (ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ನೆನಪು) ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ಕಲಾಂ ಅವರ ಶಿಷ್ಟಾಚಾರ ಹಾಗೂ ಸಮನ್ವಯ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್ ಕೆ. ಅವರ ‘ಹಮಾರಾ PRO’ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಉಡುಪಿ ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಕೃತಿ ಬಿಡುಗಡೆ ಮಾಡಿದರು. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಯು. ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಹಿರಿಯ ಉಪ ಸಂಪಾದಕ ನಿತ್ಯಾನಂದ ಪಡ್ರೆ ಕೃತಿ ಪರಿಚಯ ಮಾಡಿದರು.
ಕಲಾವಿದೆ ಪವನಾ ಬಿ. ಆಚಾರ್ ಮಣಿಪಾಲ, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಮಣಿಪಾಲದ ಪವನಾ ಬಿ. ಆಚಾರ್ ಅವರಿಂದ ವೀಣಾವಾದನ ‘ವೀಣೆ -ಬೆಳಗು- ಬೆಡಗು’ ಕಾರ್ಯಕ್ರಮ ನಡೆಯಿತು.