ಮಣಿಪಾಲ: ಶೌಚಾಲಯದಲ್ಲಿ ಅಸ್ವಸ್ಥಗೊಂಡಿದ್ದ ಬಾಲಕನ ರಕ್ಷಣೆ

ಮಣಿಪಾಲ: ತಾಯಿ ಬೈದು ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಬಾಲಕನೊಬ್ಬ ಮನೆಯ ಶೌಚಾಲಯದಲ್ಲಿ ಸುಮಾರು ತಾಸು ಬಾಗಿಲು ಹಾಕಿಕೊಂಡು ಕುಳಿತುಕೊಂಡ ಘಟನೆ ಮಣಿಪಾಲದ ಅಪಾರ್ಟ್ ಮೆಂಟ್ ವೊಂದರಲ್ಲಿ ಇಂದು ನಡೆದಿದೆ.

ಗಂಟೆಗಟ್ಟಲೇ ಮೊಬೈಲ್ ನಲ್ಲಿ‌ ಆಡುತ್ತಿದ್ದ ಮಗನಿಗೆ ತಾಯಿ ಬೈದಿದ್ದಾರೆ. ಅಲ್ಲದೆ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದೇನೆ. ಸುಮಾರು ತಾಸು ಆದ್ರೂ ಹೊರಬಂದಿಲ್ಲ. ತಾಯಿ ಸಾಕಷ್ಟು ಬಾರಿ ಕರೆದರೂ ಪ್ರತಿಕ್ರಿಯಿಸಿಲ್ಲ, ಹೊರಗೂ ಬಂದಿಲ್ಲ. ಇದರಿಂದ ಗಾಬರಿಗೊಂಡ ತಾಯಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು.

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಲಶಾಮಕ ದಳದ ಸಿಬ್ಬಂದಿ ಹಗ್ಗದ ಮೂಲಕ ಬಹುಮಹಡಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ, ಶೌಚಾಲಯದ ಕಿಟಕಿ ಒಡೆದು ಒಳಗೆ ಹೋಗಿದ್ದಾರೆ. ಆಗ ಬಾಲಕ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದನು. ಕೂಡಲೇ ಸಿಬ್ಬಂದಿ ಬಾಲಕನನ್ನು ರಕ್ಷಣೆ ಮಾಡಿ ಸಮಾಧಾನ ಮಾಡಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿಯ ಸಾಹಸಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ವಸಂತ್ ಕುಮಾರ್, ರವಿ ನಾಯಕ್, ಅಶ್ವಿನ್ ಸನೀಲ್, ಸುಧಾಕರ್ ದೇವಾಡಿಗ, ಚಾಲಕ ಆಲ್ವಿನ್ ಪ್ರಶಾಂತ್, ಗೃಹ ರಕ್ಷದ ಪ್ರಭಾಕರ ದಾವುದ್, ಹಕೀಂ ಪಾಲ್ಗೊಂಡಿದ್ದರು.