ಮಣಿಪಾಲ: ವಿದ್ಯಾರ್ಥಿಗಳ ಬೇಸಿಗೆ ರಜೆಯನ್ನು ಫಲಪ್ರದವಾಗಿ ಬಳಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದಏಪ್ರಿಲ್ 20ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ವಿಶೇಷ ಸಮರ್ ಕ್ಯಾಂಪ್ ಆಯೋಜಿಸಲಾಗಿದೆ. “ನಿಮ್ಮ ಮಕ್ಕಳಿಗೆ ಅರ್ಥಪೂರ್ಣವಾದ ಬೇಸಿಗೆ” ಎಂಬ ಧ್ಯೇಯದೊಂದಿಗೆ ಈ ಕ್ಯಾಂಪ್‌ನಲ್ಲಿ ವಿವಿಧ ನವೀನ ಮತ್ತು ಸೃಜನಾತ್ಮಕ ತರಬೇತಿಗಳನ್ನು ನೀಡಲಾಗುತ್ತಿದೆ.
ತರಬೇತಿಯಲ್ಲಿ ಏನೇನಿದೆ?ಈ ಕ್ಯಾಂಪ್‌ನಲ್ಲಿ ಜನರೇಟಿವ್ AI ಉಪಕರಣಗಳ ಬಳಕೆ, STEM IoT, ನೆಕ್ಸ್ಟ್‌ಜೆನ್ ರೋಬೋಟಿಕ್ಸ್, ಮೆಹಂದಿ ಮತ್ತು ನೇಲ್ ಆರ್ಟ್, ರೆಸಿನ್ ಆರ್ಟ್ ಹಾಗೂ ಆರ್ಟ್ಸ್ ಮತ್ತು ಕ್ರಾಫ್ಟ್ ಸೇರಿದಂತೆ ಆರು ಪ್ರಮುಖ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. AI ವಿಭಾಗದಲ್ಲಿ ChatGPT, ಪ್ರಾಂಪ್ಟ್ ಎಂಜಿನಿಯರಿಂಗ್, ಮಲ್ಟಿಮೀಡಿಯಾ ಸೃಷ್ಟಿ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಲಾಗುತ್ತದೆ.
STEM IoT ಮತ್ತು ರೋಬೋಟಿಕ್ಸ್ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪ್ರಾಜೆಕ್ಟ್‌ಗಳ ಮೂಲಕ ಕಲಿಕೆ ಅವಕಾಶ ಒದಗಿಸಲಾಗಿದ್ದು, LED ಸರ್ಕ್ಯೂಟ್, ಸ್ಮಾರ್ಟ್ ಸ್ಟ್ರೀಟ್ ಲೈಟ್, ವಾಟರ್ ಲೆವೆಲ್ ಮಾನಿಟರಿಂಗ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳನ್ನು ರೂಪಿಸುವ ತರಬೇತಿ ನೀಡಲಾಗುತ್ತದೆ. ರೋಬೋಟಿಕ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮದೇ ರೋಬೋಟಿಕ್ ಸಿಸ್ಟಮ್ ನಿರ್ಮಿಸುವ ಅವಕಾಶ ಪಡೆಯುತ್ತಾರೆ.
ಇದಲ್ಲದೆ ಮೆಹಂದಿ, ನೇಲ್ ಆರ್ಟ್, ರೆಸಿನ್ ಆರ್ಟ್ ಮತ್ತು ಕ್ರಾಫ್ಟ್ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಉತ್ತೇಜಿಸುವ ತರಬೇತಿಗಳು ನಡೆಯಲಿವೆ. ಈ ವಿಭಾಗಗಳ ಮೂಲಕ ವಿದ್ಯಾರ್ಥಿಗಳು ಬಳಕೆಗೆ ಅಥವಾ ಉಡುಗೊರೆಯಾಗಿ ನೀಡಬಹುದಾದ ವಿವಿಧ ಕಲಾಕೃತಿಗಳನ್ನು ತಯಾರಿಸುವುದನ್ನು ಕಲಿಯುತ್ತಾರೆ.
ಯಾರಿಗಾಗಿ ಕ್ಯಾಂಪ್?:
ಈ ಸಮರ್ ಕ್ಯಾಂಪ್ 6ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಬ್ಯಾಚ್‌ಗಳಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಗೋಸ್ಕರ ಇರುವ ಈ ವೇದಿಕೆಯನ್ನು ಮಿಸ್ ಮಾಡದೇ ಬಳಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ 8123165069 ಅಥವಾ 9901012334 ಸಂಖ್ಯೆಗೆ ಸಂಪರ್ಕಿಸಿ. ಹೆಚ್ಚಿನ ವಿವರಗಳಿಗೆ www.msdcskills.org ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

















