ಮಣಿಪಾಲ MSDC ಯಿಂದ ವಿದ್ಯಾರ್ಥಿಗಳಿಗಾಗಿ ‘ಮಾಸ್ಟರಿಂಗ್ ಜನರೇಟಿವ್ ಎಐ ಟೂಲ್ಸ್’ ಸಮರ್ ಕ್ಯಾಂಪ್: AI ತಾಂತ್ರಿಕತೆಯಲ್ಲಿ ಮಾಸ್ಟರ್ ಆಗಲು ಇಲ್ಲಿದೆ ಸದವಕಾಶ

ಮಣಿಪಾಲ: ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅರಿವು ಮತ್ತು ಕೌಶಲ್ಯ ವೃದ್ಧಿಸಲು ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ‘ಮಾಸ್ಟರಿಂಗ್ ಜನರೇಟಿವ್ ಎಐ ಟೂಲ್ಸ್’ ಹೆಸರಿನ ಸಮರ್ ಕ್ಯಾಂಪ್ ನ್ನು ಮೇ 18ರಿಂದ 29ರವರೆಗೆ ಆಯೋಜಿಸಲಾಗಿದೆ.

ಈ ಶಿಬಿರವು 6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಜೂನಿಯರ್ ಬ್ಯಾಚ್ ಹಾಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳ ಸೀನಿಯರ್ ಬ್ಯಾಚ್‌ಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ.

ಶಿಬಿರದಲ್ಲಿ ChatGPT, Gemini ಸೇರಿದಂತೆ ವಿವಿಧ AI ಟೂಲ್ಸ್ ಬಳಕೆ, ಪ್ರಾಂಪ್ಟ್ ಎಂಜಿನಿಯರಿಂಗ್, ವಿಸ್ವಲ್ ಮತ್ತು ಮಲ್ಟಿಮೀಡಿಯಾ ಕ್ರಿಯೇಷನ್, ವಿಡಿಯೋ ಹಾಗೂ ಆಡಿಯೋ ಜನರೇಷನ್, ಆಫೀಸ್ ಟೂಲ್ಸ್‌ನಲ್ಲಿ AI ಬಳಕೆ, ಪ್ರೆಸೆಂಟೇಷನ್ ಮತ್ತು ಡಾಕ್ಯುಮೆಂಟ್ ಸಿದ್ಧತೆ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಜೊತೆಗೆ AI ಬಳಕೆಯ ನೈತಿಕತೆ, ಸುರಕ್ಷತೆ ಮತ್ತು ಗೌಪ್ಯತೆ ಕುರಿತ ಮಾಹಿತಿಯನ್ನೂ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ.

ವಿದ್ಯಾರ್ಥಿಗಳ ಸೃಜನಶೀಲತೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ತಂತ್ರಜ್ಞಾನಾಧಾರಿತ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಶಿಬಿರದ ಶುಲ್ಕ ₹2,500 ಆಗಿದ್ದು, ಹೆಚ್ಚಿನ ಮಾಹಿತಿಗೆ 8123165069 ಸಂಖ್ಯೆಯನ್ನು ಸಂಪರ್ಕಿಸಬಹುದು.