ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಲಾಭ ಎಲ್ಲರಿಗೂ ತಲುಪಲಿ: ಡಾ. ವಿಶಾಲ್ ಆರ್

ಉಡುಪಿ: ಸಾಮಾಜಿಕ ಭದ್ರತೆಯನ್ನು ಒದಗಿಸುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳು ಪ್ರತಿಯೊಬ್ಬರ ಕುಟುಂಬಕ್ಕೆ ಕನಿಷ್ಠ ವೆಚ್ಚದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇವುಗಳನ್ನು ಪ್ರತಿಯೊಬ್ಬರೂ ಹೊಂದುವ ಹಾಗೆ ನೋಡಿಕೊಳ್ಳಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಇದರ ಕಾರ್ಯದರ್ಶಿ ಡಾ. ವಿಶಾಲ್ ಆರ್ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜೀವನದ ಅನಿಶ್ಚಿತತೆಯ ವಿರುದ್ಧ ರಕ್ಷಣೆಗಾಗಿಯೇ ಪ್ರಧಾನ […]

ಆದರ್ಶಪ್ರಾಯರಾದ ಶರಣರ ತತ್ವಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮದು: ಎಂ. ಎ ಗಫೂರ್

ಉಡುಪಿ: ಸಮಾಜದ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಿಯೊಬ್ಬ ಸಂತರು, ಶರಣರು ಹಾಗೂ ಮಹಾನ್ ವ್ಯಕ್ತಿಗಳು ಸಮಾಜದ ಆಸ್ತಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪಸರಿಸುವ ಕೆಲಸವಾಗಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ ಗಫೂರ್ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ಶಿವಶರಣೆ […]

ಕಾಪು: ಕೊಳಚೆ ನೀರು ಶುದ್ಧೀಕರಣ ಘಟಕ (STP) ನಿರ್ಮಾಣ ವಿರೋಧಿಸಿ ಪ್ರತಿಭಟನೆ- ಶಾಸಕರ ಸಾಥ್

ಉಡುಪಿ: ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿ ಕಾಪು ಪುರಸಭೆ ವತಿಯಿಂದ ನಿರ್ಮಿಸಲು ಹೊರಟಿರುವ ಕೊಳಚೆ ನೀರು ಶುದ್ಧೀಕರಣ ಘಟಕ (STP) ನಿರ್ಮಾಣ ವಿರೋಧಿಸಿ ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿ, ಮೂಳೂರು ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದು ವಿಶೇಷ.ಪುರಸಭೆಗೆ ಕೊಳಚೆ ನೀರು ಶುದ್ಧೀಕರಣ ಘಟಕ (STP) ಅತ್ಯಗತ್ಯ. ಆದರೆ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಲಿದ್ದು ಸ್ಥಳೀಯರಿಂದ ವಿರೋಧ ಇರುವುದರಿಂದ ಪರಿಸರ ಸಂಬಂದಿ ಇತರೆ ಸಮಸ್ಯೆ ಎದುರಾಗುವುದರಿಂದ […]

ಮಣಿಪಾಲ MSDC ಯಿಂದ ವಿದ್ಯಾರ್ಥಿಗಳಿಗಾಗಿ ‘ಮಾಸ್ಟರಿಂಗ್ ಜನರೇಟಿವ್ ಎಐ ಟೂಲ್ಸ್’ ಸಮರ್ ಕ್ಯಾಂಪ್: AI ತಾಂತ್ರಿಕತೆಯಲ್ಲಿ ಮಾಸ್ಟರ್ ಆಗಲು ಇಲ್ಲಿದೆ ಸದವಕಾಶ

ಮಣಿಪಾಲ: ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅರಿವು ಮತ್ತು ಕೌಶಲ್ಯ ವೃದ್ಧಿಸಲು ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ‘ಮಾಸ್ಟರಿಂಗ್ ಜನರೇಟಿವ್ ಎಐ ಟೂಲ್ಸ್’ ಹೆಸರಿನ ಸಮರ್ ಕ್ಯಾಂಪ್ ನ್ನು ಮೇ 18ರಿಂದ 29ರವರೆಗೆ ಆಯೋಜಿಸಲಾಗಿದೆ. ಈ ಶಿಬಿರವು 6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಜೂನಿಯರ್ ಬ್ಯಾಚ್ ಹಾಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳ ಸೀನಿಯರ್ ಬ್ಯಾಚ್‌ಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ. ಶಿಬಿರದಲ್ಲಿ ChatGPT, Gemini […]

ತುಳುನಾಡಿನ ಬಾಲ ಪ್ರತಿಭೆ ಉಡುಪಿಯ ಸಚಿತ ರಾವ್ ಜೂನಿಯರ್ ಮೋಡೆಲ್ ಇಂಟರ್ ನ್ಯಾಷನಲ್ ಇಂಡಿಯನ್ ಫೈನಲ್ ವಿನ್ನರ್

ಉಡುಪಿ: ಉಡುಪಿ ಪುತ್ತೂರಿನ ಬಾಲ ಪ್ರತಿಭೆ ಸಚಿತ ರಾವ್ ಆರು ಫ್ಯಾಷನ್ ಶೋ ನಲ್ಲಿ ಭಾಗವಹಿಸಿ ಆರರಲ್ಲೂ ಪ್ರಶಸ್ತಿ ಗಳಿಸಿದ ಮೊದಲ ಬಾಲ ಪ್ರತಿಭೆ. ಇದೀಗ ಕೇರಳದ ಕ್ಯಾಲಿಕಟ್ ನಲ್ಲಿ ಮೇ 7,8,9 ರಂದು ನಡೆದ ಇಂಡಿಯನ್ ಫೈನಲ್ ನಲ್ಲಿ ಕರ್ನಾಟಕ ದಿಂದ ಪ್ರತಿನಿಧಿಸಿ ವಿನ್ನರ್ ಪ್ರಶಸ್ತಿ ಗಳಿಸಿರುತ್ತಾರೆ. ಹಾಗೂ ಥೈಲ್ಯಾಂಡ್ ನಲ್ಲಿ ನಡೆಯುವ ವರ್ಲ್ಡ್ ಫೈನಲ್ ಗೆ ಆಯ್ಕೆ ಆಗಿರುತ್ತಾರೆ.