ಗ್ಯಾರಂಟಿಗಳಿಂದ ಜನರಿಗೆ ಆರ್ಥಿಕ ಭದ್ರತೆ: ಉದಯಕುಮಾರ್ ಶೆಟ್ಟಿ

ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ತಾಲೂಕು ಕಚೇರಿ ಮುಂಭಾಗದಲ್ಲಿ ‘ಸತ್ಯ ಮೇವ ಜಯತೆ’ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರ್ಕಳ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭದ್ ರಾವ್ ನೇತೃತ್ವದ ತಂಡ ಹಾಡಿನ ಮೂಲಕ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿತು. ಕಾಂಗ್ರೆಸ್ ಮುಖಂಡ […]

ಉಡುಪಿ ಉಚ್ಚಿಲ ದಸರಾ–2026: ಅ.11ರಿಂದ 21ರವರೆಗೆ ವೈಭವದ ಸಂಭ್ರಮ

ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆಶ್ರಯದಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ–2026’ ಅ.11ರಿಂದ 21ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ.ಈ ಕುರಿತು ಗುರುವಾರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಮಾಹಿತಿ ನೀಡಿದರು. ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ […]

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮದ್ವೆ ಖುಷಿಯಲ್ಲಿದ್ದ ನಟರಾದ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಶಾಕ್!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣದ ಸಾಕ್ಷಿಗಳಾಗಿರುವ ಇಬ್ಬರೂ ನಟರು, ಕೊಲೆಗೂ ಮುನ್ನ ಆರೋಪಿಯಾಗಿರುವ ನಟ ದರ್ಶನ್ ಭಾಗವಹಿಸಿದ್ದ ಬೆಂಗಳೂರಿನ ಸ್ಟೋನಿ ಬ್ರೂಕ್‌ನಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯ ವೇಳೆ ಸಾಕ್ಷ್ಯ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ 59ನೇ ಸಿಸಿಹೆಚ್ ನ್ಯಾಯಾಲಯ, ಅಕ್ಟೋಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರು ನಟರಿಗೆ […]

ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ಅ. 12 ರಂದು  ವೇದಿಕ ಗಣಿತದ ಸೂಪರ್‌ಫಾಸ್ಟ್ ಲೆಕ್ಕಾಚಾರ ಕಾರ್ಯಾಗಾರ,ಏನೆಲ್ಲಾ ಕಲಿಯಬಹುದು?

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ವೇದಿಕ ಗಣಿತ ಹಾಗೂ ವೇಗದ ಲೆಕ್ಕಾಚಾರ ಕೌಶಲ್ಯಗಳನ್ನು ಕಲಿಸುವ ವಿಶೇಷ ಕಾರ್ಯಾಗಾರವನ್ನು ಅಕ್ಟೋಬರ್ 12ರಂದು ಆಯೋಜಿಸಲಾಗಿದೆ. ಚೌಕತ್‌ನ MIT ಗೇಟ್ 4ರ ಸಮೀಪ ನಡೆಯಲಿರುವ ಕಾರ್ಯಾಗಾರವು ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ನಡೆಯಲಿದೆ. ಮಾನಸಿಕ ಗಣಿತದ ಸುಲಭ ವಿಧಾನಗಳು, ವೇಗವಾಗಿ ಸಮಸ್ಯೆಗಳನ್ನು ಪರಿಹರಿಸುವ ತಂತ್ರಗಳು ಹಾಗೂ ಲೆಕ್ಕಾಚಾರದಲ್ಲಿ ವೇಗ ಮತ್ತು ನಿಖರತೆ ಹೆಚ್ಚಿಸುವ ಪ್ರಾಯೋಗಿಕ ವಿಧಾನಗಳನ್ನು ಕಾರ್ಯಾಗಾರದಲ್ಲಿ ಪರಿಚಯಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಲೆಕ್ಕಾಚಾರದ ಮೇಲಿನ ಆತ್ಮವಿಶ್ವಾಸ ಬೆಳೆಸುವುದು ಹಾಗೂ ಸುಲಭ […]

ಮಣಿಪಾಲ MSDC ವತಿಯಿಂದ  ಶಾಲಾ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್ 13ರಿಂದ ‘ದಸರಾ ಸ್ಕಿಲ್ ಕ್ಯಾಂಪ್’

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ದಸರಾ ಸ್ಕಿಲ್ ಕ್ಯಾಂಪ್’ ಆಯೋಜಿಸಲಾಗಿದೆ. ಅಕ್ಟೋಬರ್ 13ರಿಂದ 15ರವರೆಗೆ ನಡೆಯಲಿರುವ ಈ ಕೌಶಲ್ಯ ಶಿಬಿರದಲ್ಲಿ ಮೆಹಂದಿ ಆರ್ಟ್, ರೋಬೋಟಿಕ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT), ಶಾಲಾ ಶಿಕ್ಷಣಕ್ಕಾಗಿ AI ಟೂಲ್ಸ್ ಹಾಗೂ ರೆಸಿನ್ ಆರ್ಟ್ ಕುರಿತು ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಾಂತ್ರಿಕ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ […]