ಉಡುಪಿ: ಮಣಿಪಾಲ ಶ್ರೀ ನರಸಿಂಹ ದೇವಸ್ಥಾನದಲ್ಲಿ ಬಡಗುತಿಟ್ಟಿನ ಯಕ್ಷಗಾನ ತಾಳ ನಾಟ್ಯ, ಕಲಿಕಾ ಶಾಲೆ ತರಗತಿಯನ್ನು ಭಾನುವಾರ ಉದ್ಘಾಟನೆಗೊಂಡಿತು.
ಉಡುಪಿ ನಗರಸಭಾ ಅಧ್ಯಕ್ಷ್ಯ ಸುಮಿತ್ರ್ರಾ ಆರ್. ನಾಯಕ್ ಉದ್ಘಾಟಿಸಿ ಶುಭ ಕೋರಿದರು.
ಸಭಾಧ್ಯಕ್ಷತೆ ವಹಿಸಿದ್ದ ದೇವಳದ ಮುಕ್ತೇಸರರಾದ ರಮೇಶ್ ಸಾಲ್ವಂಕಾರ್ ಮಾತನಾಡಿ, ಯಕ್ಷಗಾನ ಒಂದು ಪರಿಪೂರ್ಣ ಕಲೆ. ಇಲ್ಲಿ ಗಾಯನ, ವಾದನ, ನರ್ತನ, ವೇಷಭೂಷಣ, ಮಾತುಗಾರಿಗೆ, ಮುಖವರ್ಣಿಕೆ ಬಣ್ಣ ಎಲ್ಲವೂ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವ ಧೀಮಂತ ಕಲೆ ಎಂದು ಬಣ್ಣಿಸಿ ಆರಂಭೊತ್ಸವಕ್ಕೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜಸೇವಕ ಸುನೀಲ್ ಬೋರ್ಕರ್ ಪುತ್ತೂರು ಶುಭಕೋರಿ ಯಶಸ್ಸಿಗೆ ಹಾರೈಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಯಕ್ಷಗಾನದ ಗುರು ಶಶಿಕಲಾ ಪ್ರಭು ಚೇರ್ಕಾಡಿ ಕಲಿಕಾ ತರವೇತಿ ಚಾಲನೆ ನೀಡಿದರು. ಕಾವ್ಯ ಸತೀಶ್ ಮರಾಠೆ ಪ್ರಸ್ತಾಪನೆ ಮಾಡಿದರು.
ನಿತ್ಯಾನಂದ ನರಸಿಂಗೆ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ದೇವಳದ ಅಧ್ಯಕ್ಷ ಆನಂದ ನಾಯಕ್ ಅರ್ಬಿ, ಕಲಾಭಿಮಾನಿ ಬಳಗದ ಅಧ್ಯಕ್ಷ ಪ್ರಕಾಶ್ ನಾಯಕ್ ನರಸಿಂಗೆ, ಮಣಿಪಾಲ ಇನ್ಸಿಟ್ಯೂಟ್ ಆಪ್ ಮ್ಯಾನೇಜ್‍ಮೆಂಟ್ ನ ನಿರ್ದೇಶಕರಾದ ರವೀಂದ್ರನಾಥ ನಾಯಕ್, ನಾರಾಯಣ ಪ್ರಭು ಗುಳ್ಮೆ, ಶಿವಾನಂದ ಪ್ರಭು ಎಳ್ಳಾರೆ, ಸುದೀಶ್ ನಾಯಕ್ ಕುಕ್ಕೆಹಳ್ಳಿ, ಸುಂದರ ಪ್ರಭು ಹಾಗು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದರು. ಶಶಿಕಲಾ ಪ್ರಭು ವಂದಿಸಿದರು.