ಮಣಿಪಾಲ: ವ್ಯಾಪಾರ ಸಂಸ್ಥೆಯ ಮಾಲೀಕರು ಹಾಗೂ ಉದ್ಯಮಿಗಳಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸ್ವತಃ ಕಾರ್ಯನಿರ್ವಹಿಸಲು ನೆರವಾಗುವ ಡಿ.ಐ.ವೈ (Do It Yourself) ತರಬೇತಿ ಕಾರ್ಯಕ್ರಮವನ್ನು MSDC ಮತ್ತು ಡಾವಿನ್ಚಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಏನಿದೆ?
ಈ ತರಬೇತಿ ಮೂಲಕ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನ ಅಗತ್ಯ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಒಟ್ಟು 10 ಸೆಷನ್‌ಗಳಲ್ಲಿ (20 ಗಂಟೆಗಳು) ನಡೆಯುವ ಈ ತರಬೇತಿಯಲ್ಲಿ ವಾಟ್ಸಪ್ ಬಿಸಿನೆಸ್ ಖಾತೆ ನಿರ್ಮಾಣ, ಇನ್‌ಸ್ಟಾಗ್ರಾಂ ಜಾಹೀರಾತು ನಿರ್ವಹಣೆ, ಫೇಸ್ಬುಕ್ ಹಾಗೂ ಮೆಟಾ ಜಾಹೀರಾತು ಸೆಟ್ಟಿಂಗ್ಸ್, ಯೂಟ್ಯೂಬ್ ಚಾನೆಲ್ ಮತ್ತು ಜಾಹೀರಾತುಗಳು, ಗೂಗಲ್ ಮೈ ಬಿಸಿನೆಸ್ ಲಿಸ್ಟಿಂಗ್ ಮತ್ತು ಜಾಹೀರಾತು ನಡೆಸುವುದು, ಟ್ವಿಟ್ಟರ್ ಹಾಗೂ ಲಿಂಕ್ಡಿನ್ ಸೆಟ್‌ಅಪ್ ಸೇರಿದಂತೆ ಎಸ್‌ಇಒ (ಸರ್ಚ್ ಎಂಜಿನ್ ಆಪ್ಟಿಮೈಸೇಶನ್) ಕುರಿತ ತರಬೇತಿಯನ್ನು ನೀಡಲಾಗುತ್ತದೆ.
ತರಬೇತಿ ಶುಲ್ಕವನ್ನು ₹6,000 ನಿಗದಿಪಡಿಸಲಾಗಿದ್ದು, ಭಾಗವಹಿಸುವವರು ಆಸಕ್ತಿ ಇರುವವರಿಗೆ ಶೇ. 100% ಹಣವನ್ನು ಹಿಂತಿರುಗಿಸುವ ಭರವಸೆ ಕೂಡ ಆಯೋಜಕರಿಂದ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9164062211, 8296615560 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ. ಜೊತೆಗೆ www.vinciinstitute.com ಮತ್ತು www.msdcskills.org ವೆಬ್‌ಸೈಟ್‌ಗಳಲ್ಲಿಯೂ ವಿವರಗಳನ್ನು ಪಡೆಯಬಹುದು.

















