ಮಣಿಪಾಲ: ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಬೆಂಕಿ ಅವಘಡ

ಮಣಿಪಾಲ: ಇಲ್ಲಿನ ಮಂಚಿ ದುಗ್ಲಿ ಪದವು ಎಂಬಲ್ಲಿ ತಡರಾತ್ರಿ ಸುಮಾರಿಗೆ ಬೆಂಕಿಬಿದ್ದಿದ್ದು, ಯುವಕರಿಬ್ಬರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಸೋಮವಾರ 10.30 ಗಂಟೆ ಸುಮಾರಿಗೆ ಮಣಿಪಾಲ ಅಲೆವೂರು ರಸ್ತೆಯ ದುಗ್ಲಿ ಪದವು ಎಂಬಲ್ಲಿ ಬೆಂಕಿಬಿದ್ದಿದ್ದು, ಅದೇ ಮಾರ್ಗವಾಗಿ ಬರುತ್ತಿದ್ದ ಬೈಕ್ ಸವಾರರಾದ ಅಲೆವೂರಿನ ಜಲೇಶ್ ಶೆಟ್ಟಿ ಮತ್ತು ಕುಕ್ಕಿಕಟ್ಟೆಯ ನವೀನ್ ಸೇರಿಗಾರ್ ಕೂಡಲೇ ಅಗ್ನಿಶಾಮಕ ದಳಕ್ಕೆ ತಿಳಿಸಿ ಸ್ಥಳೀಯರನ್ನು ಎಬ್ಬಿಸಿ ಬೆಂಕಿಯನ್ನು ನಂದಿಸಿದರು.

ಯುವಕರ ಸಮಯಪ್ರಜ್ಞೆಯಿಂದ ಬಹಳ ದೊಡ್ಡ ಅನಾಹುತ ತಪ್ಪಿದೆ. ಯುವಕರ ಸಮಯಪ್ರಜ್ಞೆಯಿಂದ ಬಹಳಷ್ಟು ಜೀವ ಹಾನಿ ಮತ್ತು ಆಸ್ತಿಪಾಸ್ತಿ ರಕ್ಷಣೆಯಾಗಿದೆ.