ಮಂಗಳೂರು: ನಗರಾಭಿವೃದ್ಧಿ ಇಲಾಖೆ ಮೂಲಕ ಪೇಯಿಂಗ್ ಗೆಸ್ಟ್ ಗಳಿಗೆ ಹೊಸ ನೀತಿ ನಿಯಮ ತರಲಾಗುವುದು. ಪಿಜಿಗಳಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಜಿಗಳು ಯಾವಾಗ, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ನಿಯಮ ಒಳಗೊಂಡಿದೆ. ಪಿಜಿ ಯಾವ ರೀತಿ ಇರಬೇಕು, ಮಹಿಳೆಯರಿಗೆ ಪಿಜಿಗಳಲ್ಲಿ ನೀಡುವ ಭದ್ರತೆ ಮುಂತಾದವುಗಳನ್ನು ಈ ನಿಯಮದಲ್ಲಿ ತರಲಾಗುವುದು. ಇದರರಿಂದ ಪಿಜಿಯಲ್ಲಿರುವ ಮಹಿಳೆಯರಿಗೂ ಭದ್ರತೆ ದೊರೆತಂತಾಗುತ್ತದೆ ಎಂದರು.
ಈಗಾಗಲೇ ಪಿಜಿಗಳಿಗೆ ನಿಯಮ ರೂಪಿಸಬೇಕೆಂದು ಹಲವಾರು ಮಂದಿ ಬೇಡಿಕೆ ಸಲ್ಲಿಸಿದ್ದಾರೆ. ರಾಜ್ಯದಲ್ಲೇ ಮಾದರಿ ಯೋಜನೆಯಾಗಿದೆ. ರಾಜ್ಯದ ಹೋಮ್ ಸ್ಟ್ರೇಗೂ ನೂತನ ನೀತಿ ತರಲು ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು.
ಸಾಮೂಹಿಕ ಪ್ರಾರ್ಥನೆಗೆ ಶಕ್ತಿ
ಮುಜರಾಯಿ ಇಲಾಖೆಯಿಂದ ಮಳೆಗಾಗಿ ಪ್ರಾರ್ಥನೆ ಸುತ್ತೋಲೆ ವಿಚಾರದ ಕುರಿತು ಮಾತನಾಡಿದ ಅವರು, ಸಾಮೂಹಿಕ ಪ್ರಾರ್ಥನೆಗೆ ಒಂದು ಶಕ್ತಿ ಇದೆ. ಪ್ರಾರ್ಥನೆ ಶೀಘ್ರವಾಗಿ ಫಲ ನೀಡುವುದಿಲ್ಲ. ತಡವಾಗಿ ಆದ್ರೂ ಫಲ ಸಿಗುತ್ತೆ. ದೇವಸ್ಥಾನ, ಧಾರ್ಮಿಕ ಸ್ಥಳಗಳಿಗೆ ಖರ್ಚು ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ಪ್ರತಿಯೊಂದು ಕಾರ್ಯದಲ್ಲೂ ದೇವರ ವಿಶೇಷ ಅನುಗ್ರಹ ಅತ್ಯಗತ್ಯ. ಇಲ್ಲದಿದ್ದರೆ ಯಾವುದೇ ಕೆಲಸ ನಡೆಯುದಿಲ್ಲ ಎಂದು ಅವರು ಹೇಳಿದರು.
ReplyForward
|