ಕಾರ್ಪೊರೇಟ್ ಉದ್ಯೋಗಕ್ಕೆ ವಿದಾಯ ಹೇಳಿ ಕೃಷಿಯಲ್ಲಿ ಬದುಕು ಕಟ್ಟಿ ವರ್ಷಕ್ಕೆ 15 ಲಕ್ಷ ಸಂಪಾದಿಸುವ ಮಂಗಳೂರಿನ ಮಾದರಿ ಯುವಕ ಚೇತನ್ ಶೆಟ್ಟಿ!!

ಇಂದಿನ ಕಾಲದ ಯುವಕರೆಲ್ಲಾ ಕೈ ತುಂಬಾ ಸಂಪಾದನೆ ಮಾಡುವ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸಕ್ಕಾಗಿ ಹಾತೊರೆಯುತ್ತಿರುವಾಗ, ಇಲ್ಲೊಬ್ಬ 35 ವರ್ಷದ ಯುವಕ ತನ್ನ ಕಾರ್ಪೊರೇಟ್ ಕೆಲಸವನ್ನು ತ್ಯಜಿಸಿ ಕೃಷಿಯಲ್ಲಿ ನೆಮ್ಮದಿ ಮತ್ತು ಬದುಕನ್ನು ಕಂಡುಕೊಂಡಿದ್ದಾರೆ. ಮಂಗಳೂರಿನ ಬೆಳ್ಳಾರೆಯ ನಿವಾಸಿ ಚೇತನ್ ಶೆಟ್ಟಿ ತನ್ನ ಎಂಟು ವರ್ಷಗಳ ಕಾರ್ಪೊರೇಟ್ ಜಗತ್ತಿಗೆ ವಿದಾಯ ಹೇಳಿ ಹುಟ್ಟೂರಿಗೆ ಮರಳಿ ಕೃಷಿಕರಾಗಿ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.

‘Back to Roots’: Mangaluru Man Quit Successful Career For Farming; Earns Rs 15 Lakh/Year

2017 ರಲ್ಲಿ, ಬೆಂಗಳೂರಿನಿಂದ ಮರಳಿದ ಚೇತನ್ ಮಂಗಳೂರು ನಗರದಿಂದ 75 ಕಿಮೀ ದೂರದಲ್ಲಿರುವ ಬೆಳ್ಳಾರೆಯಲ್ಲಿರುವ ತಮ್ಮ ಪೂರ್ವಜರ ಮನೆಗೆ ಸ್ಥಳಾಂತರಗೊಂಡು ತಮ್ಮ ಜಮೀನಿನಲ್ಲಿ ಬಾಳೆ, ಪಪ್ಪಾಯಿ, ಮತ್ತು ದ್ರಾಕ್ಷಿಯಂತಹ ವಿದೇಶಿ ಹಣ್ಣುಗಳನ್ನು ಬೆಳೆಯಲು ಪ್ರಾರಂಭಿಸಿದರು. ಇಂದು, ಮಂಜಣ್ಣ ಶೆಟ್ಟಿ ಫ್ಯಾಮಿಲಿ ಫಾರ್ಮ್ಸ್ ನಲ್ಲಿ 2,500 ಕ್ಕೂ ಹೆಚ್ಚು ಅಡಿಕೆ ಮರಗಳು, 800 ಕಾಳುಮೆಣಸು ಬಳ್ಳಿಗಳು, 50 ಅಡಕೆ ಮರಗಳು, 300 ತೆಂಗಿನ ಮರಗಳು, 650 ರಂಬುಟಾನ್ ಮರಗಳು, 100 ಕ್ಕೂ ಹೆಚ್ಚು ಮ್ಯಾಂಗೋಸ್ಟೀನ್ ಮರಗಳು ಮತ್ತು 50 ಆವಕಾಡೊ ಗಿಡಗಳನ್ನು ಬೆಳೆಯಲಾಗುತ್ತಿದೆ.

ಚೇತನ್ ಶೆಟ್ಟಿ ಹುಟ್ಟಿ ಬೆಳೆದದ್ದು ಮಂಗಳೂರಿನಲ್ಲಿ. ಶಾಲಾ ರಜಾ ದಿನಗಳಲ್ಲಿ ಅವರು ಬೆಳ್ಳಾರೆ ಗ್ರಾಮದಲ್ಲಿರುವ ತಮ್ಮ ಅಜ್ಜ-ಅಜ್ಜಿ ಮನೆಯಲ್ಲಿ ದಿನಕಳೆಯುತ್ತಿದ್ದ ಅವರು ದಿನವಿಡೀ ಭತ್ತದ ಗದ್ದೆಗಳಲ್ಲಿ ಮತ್ತು ಅವರ ಮನೆಯ ಸುತ್ತಲಿನ ಎತ್ತರದ ಅಡಿಕೆ ಮರಗಳ ನಡುವೆ ಆಟವಾಡುತ್ತಿದ್ದರು.

“ನಾವು ಮುಂಜಾನೆ ಬೇಗ ಎದ್ದು ಮಾವಿನ ಕಾಯಿ ಕೊಯ್ದು ಮನೆಗೆ ಬರುತ್ತಿದ್ದೆವು. ಆಮೇಲೆ ಮತ್ತೆ ಹೊಲಕ್ಕೆ ಹೋಗಿ ನಮ್ಮ ಹೊಲಗಳಿಗೆ ನೀರು ಹಾಕುತ್ತಿದ್ದೆವು. ಇಡೀ ದಿನವನ್ನು ಜಮೀನಿನಲ್ಲಿ ಕಳೆಯುವುದು ತುಂಬಾ ಆಕರ್ಷಕವಾಗಿತ್ತು ”ಎಂದು ಅವರು ಬೆಟರ್ ಇಂಡಿಯಾ ಕ್ಕೆ ನೀಡಿದ ತಮ್ಮ ಸಂದರ್ಶನದಲ್ಲಿ ನೆನಪಿನ ಬುತ್ತಿಯನ್ನು ತೆರೆದಿಡುತ್ತಾರೆ.

Chethan along with his family personally harvest, sort, and pack the produce. At times, he even carries the boxes for transportation.

ಅವರ ಕಾರ್ಪೊರೇಟ್ ಡೆಸ್ಕ್‌ನಲ್ಲಿ ಕೆಲಸ ಮಾಡುವಾಗಲೂ ಈ ನೆನೆಪುಗಳು ಅವರನ್ನು ಕಾಡುತ್ತಿದ್ದು ಏನೋ ಕಳೆದುಕೊಂಡ ಅನುಭವ ಅವರಿಗೆ ನೀಡುತ್ತಿದ್ದವು ಎನ್ನುವುದನ್ನು ಚೇತನ್ ಹಂಚಿಕೊಳ್ಳುತ್ತಾರೆ. ಕುಟುಂಬ ಮತ್ತು ಸ್ನೇಹಿತರ ವಿರೋಧದ ನಡುವೆಯೂ ಅವರು ತಮ್ಮ ಉದ್ಯೋಗಕ್ಕೆ ವಿದಾಯ ಹೆಳಿ ಅಜ್ಜನಂತೆ ರೈತರಾಗಲು ನಿರ್ಧರಿಸಿ ಮನೆಯ ದಾರಿ ಹಿಡಿಯುತ್ತಾರೆ. ಆರಂಭದಲ್ಲಿ ಹೆತ್ತವರು ಚೇತನ್ ನಿರ್ಧಾರವನ್ನು ವಿರೋಧಿಸುತ್ತಾರಾದರೂ ಇದೀಗ ಮಗನ ಸಾಧನೆಗೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ.

ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ದಾಗ ತಮ್ಮ ಅಡಿಗೆ ಮನೆಯಲ್ಲಿ ಅಣಬೆ ಬೆಳೆಸಿ ಹತ್ತಿರದ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದುದ್ದನ್ನು ಚೇತನ್ ನೆನೆಪಿಸಿಕೊಳ್ಳುತ್ತಾರೆ. ಏತನ್ಮಧ್ಯೆ, ತಮ್ಮ ಪೂರ್ವಜರ ಜಮೀನಿನಲ್ಲಿ ಅರಿಶಿನವನ್ನು ಬೆಳೆದು ಸುಮಾರು 3,000 ಕೆಜಿಯಷ್ಟು ಉತ್ತಮ ಇಳುವರಿಯನ್ನು ಪಡೆದದ್ದು ಅವರಿಗೆ ಸ್ಪೂರ್ತಿ ನೀಡುತ್ತದೆ. ಮುಂದೆ ಮಿಶ್ರ ಬೆಳೆ ಪದ್ದತಿಯನ್ನು ಅವರು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುತ್ತಾರೆ.

ಉದ್ಯೋಗದಲ್ಲಿ ತಾವು ಉಳಿಸಿದ 10 ಲಕ್ಷ ರೂ ಗಳನ್ನು ಖರ್ಚು ಮಾಡಿ ಅವರು ತಮ್ಮ 10 ಎಕರೆ ಪೂರ್ವಜರ ಜಮೀನನ್ನು ಸಿದ್ಧಪಡಿಸಿ, ಹೊಸ ಬೋರ್‌ವೆಲ್ ತೋಡಿ, 550 ರಂಬುಟಾನ್ ಗಿಡಗಳು, 50 ಮ್ಯಾಂಗೋಸ್ಟೀನ್ ಗಿಡಗಳು ಮತ್ತು 100 ತೆಂಗಿನ ಗಿಡಗಳನ್ನು ಜೊತೆಗೆ ಬೆಂಡೆ, ತೊಂಡೆ, ಸೌತೆಕಾಯಿ, ಬೀನ್ಸ್, ಮೂಲಂಗಿ ಮತ್ತು ಹಸಿರು ಸೊಪ್ಪುಗಳನ್ನು ಬೆಳೆಸಿ ಇಳುವರಿ ಪಡೆಯುತ್ತಾರೆ.

Turmeric being dried in Chethan's farm.

ಆರಂಭಿಕ ಹಂತದಲ್ಲಿ ಆರ್ಥಿಕ ಅಡೆತಡೆ, ಕೂಲಿ ಕಾರ್ಮಿಕರ ಅಭಾವದ ಸಮಸ್ಯೆಗಳನ್ನು ಎದುರಿಸಿದರೂ ಇದೀಗ ಇದೆಲ್ಲವನ್ನೂ ಮೀರಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಬದುಕು ಕಟ್ಟಿಕೊಂಡಿರುವ ಚೇತನ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಬೆಂಗಳೂರು, ಮುಂಬೈ, ಪುಣೆ, ದೆಹಲಿ, ಅಮೃತಸರ ಮತ್ತು ಹೈದರಾಬಾದ್‌ನಂತಹ ದೊಡ್ಡ ನಗರಗಳನ್ನು ಒಳಗೊಂಡಂತೆ ದೇಶದಾದ್ಯಂತ ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ತಾಜಾ ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿರುವ ಚೇತನ್, ಕಳೆದ ವರ್ಷ ಸುಮಾರು 5,200 ಕೆಜಿ ಉತ್ಪನ್ನವನ್ನು ಮಾರಾಟ ಮಾಡಿ 15 ಲಕ್ಷ ರೂಪಾಯಿ ಗಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Chethan used income from selling rambutan to built a house in the village.

ಕೃಷಿ ಜೀವನದಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿರುವ ಚೇತನ್ ಶೆಟ್ಟಿ, ತಮ್ಮ ಹುಟ್ಟೂರಿನಲ್ಲಿ ಪುಟ್ಟದೊಂದು ಮನೆಯನ್ನು ಕಟ್ಟಿ ಹೆತ್ತವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

ಮಾಹಿತಿ ಮತ್ತು ಫೋಟೋ ಕೃಪೆ: ದ ಬೆಟರ್ ಇಂಡಿಯಾ