ಅಂತರ್ ಜಿಲ್ಲಾ ಗೋಕಳ್ಳ ಬಶೀರ್ ಬಂಧನ; ಉಜಿರೆ ಸೇರಿದಂತೆ ಹಲವೆಡೆ ಕಳ್ಳತನ ನಡೆಸಿದ್ದ ಬಶೀರ್

ಮಂಗಳೂರು: ಕಳೆದ ಕೆಲದಿನಗಳ‌ ಹಿಂದೆ ಉಜಿರೆ ಸಮೀಪ ಕಾರಿನಲ್ಲಿ‌ ಅಕ್ರಮ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದೆ.
ಬಶೀರ್ ಯಾನೆ ಆರ್ಗಾ ಬಶೀರ್ ಬಂಧಿತ ಆರೋಪಿ. ಮೂಡಬಿದ್ರೆಯ ತೋಡಾರ್ ಬಳಿ ಈತನನ್ನು ವಶಕ್ಕೆ ಪಡೆಯಲಾಗಿದೆ. ಹಲವಾರು ದನಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ತಲೆ ಮರೆಸಿಕೊಂಡಿದ್ದು, ದನ ಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ. ಅಂತರ್ ಜಿಲ್ಲಾ ದನಕಳ್ಳತನ ಮತ್ತು ಮಾರಾಟವನ್ನೇ ಕಸುಬನ್ನಾಗಿಸಿಕೊಂಡಿದ್ದ ಈತನ ವಿರುದ್ದ ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಕೇಸ್ ದಾಖಲಾಗಿದ್ದವು. ಸುರತ್ಕಲ್ ಕೃಷ್ಣಾಪುರ ನೈತಂಗಡಿಯಲ್ಲಿ ಮನೆಯಿಂದ ದನ ಕಳ್ಳತನ ನಡೆಸಿದ್ದ. ಈತನ ಸಹಚರರು ದಸ್ತಗಿರಿಯಾದರೂ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದರು. ಮುಂಜಾಗ್ರತಾ ಜಾಮೀನು ಪಡೆದ ಬಳಿಕ ಅದೇ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು.
ಉಜಿರೆಯಲ್ಲಿ ನಡೆದ್ದೇನು:
ಕಳೆದ ಕೆಲ ದಿನಗಳ ಹಿಂದೆ ಉಜಿರೆಯಲ್ಲಿ ದನಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದಾಗ ಕಾರು ಪಲ್ಟಿಯಾಗಿ ಬಿದ್ದಿತ್ತು. ಕಾರಿನಲ್ಲಿದ್ದ ದನಗಳೆಲ್ಲ ಸಾವನ್ನಪ್ಪಿದ್ದವು. ಈ ವಾಹನದಲ್ಲಿ ಈತನೇ ಚಾಲಕನಾಗಿದ್ದ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಕಾರ್ಯಾಚರಣೆ ನಡೆಸಿದ್ದು, ಸದ್ಯ ಈತನನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ.