ಮಂಗಳೂರು: ಮಂಗಳೂರಿನಲ್ಲಿ ಬುಧವಾರ ಮೂವರು ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೋಳೂರಿನ 62 ವರ್ಷದ P-579 ವೃದ್ಧ,11 ವರ್ಷದ P-674 ಬಾಲಕಿ, ಬಂಟ್ವಾಳದ 16 ವರ್ಷದ P-676 ಡಿಸ್ಚಾರ್ಜ್ ಆದವರು.
ಬೋಳೂರಿನ ಅಜ್ಜ ಮತ್ತು ಮೊಮ್ಮಗಳು ಹಾಗೂ ಪತ್ನಿ ಮತ್ತು ಪತ್ನಿಯ ತಾಯಿಯನ್ನು ಕೊರೋನಾದಿಂದ ಕಳೆದುಕೊಂಡಿದ್ದ 62 ವರ್ಷದ ವೃದ್ಧ ಗುಣಮುಖರಾಗಿದ್ದಾರೆ.
11 ವರ್ಷದ ಬಾಲಕಿಯ ತಂದೆ ತಾಯಿಗೆ ಇನ್ನು ಕೊರೋನಾ ಚಿಕಿತ್ಸೆ ಮುಂದುವರಿದಿದೆ.
ಗುಣಮುಖರಾದ ಅಜ್ಜ ಮತ್ತು ಮೊಮ್ಮಗಳನ್ನು ಸ್ಥಳೀಯ ನಿವಾಸಿಗಳು ಸ್ವಾಗತಿಸಿದರು.