ಮಂಗಳೂರು: ಮೂವರು ಕೊರೊನಾ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಂಗಳೂರು: ಮಂಗಳೂರಿನಲ್ಲಿ ಬುಧವಾರ ಮೂವರು ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೋಳೂರಿನ 62 ವರ್ಷದ P-579 ವೃದ್ಧ,11 ವರ್ಷದ P-674 ಬಾಲಕಿ, ಬಂಟ್ವಾಳದ 16 ವರ್ಷದ P-676 ಡಿಸ್ಚಾರ್ಜ್ ಆದವರು. ಬೋಳೂರಿನ ಅಜ್ಜ ಮತ್ತು ಮೊಮ್ಮಗಳು ಹಾಗೂ‌ ಪತ್ನಿ ಮತ್ತು ಪತ್ನಿಯ ತಾಯಿಯನ್ನು ಕೊರೋನಾದಿಂದ ಕಳೆದುಕೊಂಡಿದ್ದ 62 ವರ್ಷದ ವೃದ್ಧ ಗುಣಮುಖರಾಗಿದ್ದಾರೆ. 11 ವರ್ಷದ ಬಾಲಕಿಯ ತಂದೆ ತಾಯಿಗೆ ಇನ್ನು ಕೊರೋನಾ ಚಿಕಿತ್ಸೆ ಮುಂದುವರಿದಿದೆ. ಗುಣಮುಖರಾದ ಅಜ್ಜ ಮತ್ತು ಮೊಮ್ಮಗಳನ್ನು ಸ್ಥಳೀಯ ನಿವಾಸಿಗಳು ಸ್ವಾಗತಿಸಿದರು.

ಮೂಡುಬಿದಿರೆ ಆಳ್ವಾಸ್ ನಲ್ಲಿ ಆರೋಗ್ಯ ರಕ್ಷಾ ಔಷಧ ವಿತರಣಾ ಕಾರ್ಯಕ್ರಮ

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಸಹಭಾಗಿತ್ವದಲ್ಲಿ, ಮೂಡುಬಿದಿರೆಯಲ್ಲಿ ಕೋವಿಡ್೧೯ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಪೋಲಿಸ್ ಸಿಬ್ಬಂಧಿ ಹಾಗೂ ಪೌರ ಕಾರ್ಮಿಕರಿಗೆ ಆಯುರ್ವೇದ ರೋಗ ನಿರೋಧಕ ಗುಣಗಳುಳ್ಳ ಔಷಧ (ಗಿಡಮೂಲಿಕೆ) ಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಳ್ವಾಸ್ ಹೆಲ್ತ್ ಸೆಂಟರ್, ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿನಯ್ ಆಳ್ವ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲೆ ಡಾ.ಝೆನಿಕಾ ಡಿಸೋಜ ಆಯುರ್ವೇದ ರೋಗ ನಿರೋಧಕ ಔಷಧಗಳ […]

ವಿದ್ಯಾರ್ಥಿಗಳಿಗೆ ಹೈಟೆಕ್ ತಂತ್ರಜ್ಞಾನದೊಂದಿಗೆ ಶಿಕ್ಷಣ ಕೊಡ್ತಿದೆ ವಕ್ವಾಡಿಯ ಗುರುಕುಲ ಶಾಲೆ: ಇಲ್ಲೀಗ ಎಲ್ಲವೂ ಆನ್ ಲೈನ್

ಕುಂದಾಪುರ: ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್  ಜಾರಿಯಲ್ಲಿರುವುದರಿಂದ ಶಾಲೆಗಳು ಬಾಗಿಲು ಮುಚ್ಚಿದ್ದರೂ ಈ ಶಾಲೆಯಲ್ಲಿ ಹೊಸ ಹೊಸ ತಂತ್ರಜ್ಞಾನದೊಂದಿಗೆ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲಾಗುತ್ತಿದೆ. ಮನೇಲೇ ಕೂತಿರಿ, ಮನೆಯಿಂದಲೇ ಶಿಕ್ಷಣ ಪಡೆಯಿರಿ ಅನ್ನುವ ಪರಿಕಲ್ಪನೆಯಲ್ಲಿ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆ ಯಶಸ್ವಿ ಶಿಕ್ಷಣ ನೀಡುತ್ತಿದೆ. ಆನ್ ಲೈನ್ ಎಜುಕೇಶನ್ ವಿದ್ಯಾರ್ಥಿಗಳಿಗಿಲ್ಲ ಟೆನ್ಶನ್: ಇದೀಗ ಆನ್‌ ಲೈನ್ ತರಬೇತಿಗಾಗಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ […]

ಉಡುಪಿಗೆ ಮತ್ತೆ ಮುಂಬೈ ಆಘಾತ: ಮುಂಬೈನಿಂದ ಬಂದಿರುವ ಆರು ಮಂದಿಯಲ್ಲಿ ಕೊರೊನಾ ಸೋಂಕು

ಉಡುಪಿ: ಉಡುಪಿ ಜಿಲ್ಲೆಗೆ ಮುಂಬೈ ನಂಟು ಮತ್ತಷ್ಟು ಆಘಾತ ನೀಡಿದ್ದು, ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ನಲ್ಲಿದ್ದ ಆರು ಮಂದಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿ. ಜಗದೀಶ್ ತಿಳಿಸಿದ್ದಾರೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಹಿತಿ ನೀಡಿದ ಅವರು, ಮೇ 14ರಂದು ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತನ ಸಂಪರ್ಕದಲ್ಲಿದ್ದ 44 ವರ್ಷದ ಮಹಿಳೆ ಹಾಗೂ 15 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರು ಮೃತಪಟ್ಟ ಸೋಂಕಿತನೊಂದಿಗೆ ಮುಂಬೈನಿಂದ ಒಟ್ಟಿಗೆ ಪ್ರಯಾಣ ಬೆಳೆಸಿದ್ದರು. ಹಾಗೆ ಮುಂಬೈನಿಂದ ಬಂದು ಹೆಬ್ರಿಯಲ್ಲಿ […]

ಆಚಾರ್ಯಾಸ್ ಏಸ್ ಸಂಸ್ಥೆಯಲ್ಲಿ ಶುರುವಾಗಿದೆ ಎಸೆಸ್ಸೆಲ್ಸಿ, ಪಿಯುಸಿ ಅನ್‍ಲೈನ್ ತರಬೇತಿ

ಉಡುಪಿ:ವಿವಿಧ ಹಂತದ ಶೈಕ್ಷಣಿಕ ತರಬೇತಿ ನೀಡುವುದರಲ್ಲಿ ಉಡುಪಿ ಮತ್ತು ಬ್ರಹ್ಮಾವರದಲ್ಲಿ ಹೆಸರುವಾಸಿಯಾಗಿರುವ ಏಸ್ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಆನ್‍ಲೈನ್ ತರಬೇತಿಯನ್ನು ಆರಂಭಿಸಲಾಗಿದೆ. ಒಂಭತ್ತನೇ ತರಗತಿ ಎಸೆಸ್ಸೆಲ್ಸಿ, ಪಿಯುಸಿ, ಸಿಯುಟಿ, ಜೆಇಇ ಮೇನ್ಸ್ ಹಾಗೂ ನೀಟ್ ಪರೀಕ್ಷೆಗಳಿಗೆ ಉತ್ಕ್ರಷ್ಟ ಗುಣಮಟ್ಟದ ಅನ್‍ಲೈನ್ ತರಬೇತಿಯನ್ನು ಏಸ್ ಸಂಸ್ಥೆಯ ಆಯೋಜಿಸಿದೆ. ಪರೀಕ್ಷೆಗಳಿಗೆ ಸಿದ್ದತೆ:ಉತ್ಕೃಷ್ಟ ತರಬೇತಿಗೆ ಆದ್ಯತೆ: ಪ್ರಥಮ ಪಿಯುಸಿ ಪೂರೈಸಿ ದ್ವಿತೀಯ ಪಿಯುಸಿಗೆ ಪಾದಾರ್ಪಣೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಮೇ 25 ತಾರೀಖಿನಿಂದ ಜೆಇಇ […]