udupixpress
Home Trending ಮಂಗಳೂರು: ನಿಜಾಮುದ್ದೀನ್ ತಬ್ಲಿಘಿ‌ ಜಮಾತ್ ಗೆ ತೆರಳಿದ ಇಬ್ಬರಿಗೆ ಕೊರೊನ

ಮಂಗಳೂರು: ನಿಜಾಮುದ್ದೀನ್ ತಬ್ಲಿಘಿ‌ ಜಮಾತ್ ಗೆ ತೆರಳಿದ ಇಬ್ಬರಿಗೆ ಕೊರೊನ

ಮಂಗಳೂರು: ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಗೆ ಹೋದ ಇಬ್ಬರು ಸೇರಿದಂತೆ ದ.ಕ‌.ಜಿಲ್ಲೆಯಲ್ಲಿ‌ ಶನಿವಾರ ಒಟ್ಟು ಮೂವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

43 ಮತ್ತು 52 ವರ್ಷದ ಇಬ್ಬರು ನಿಜಾಮುದ್ದೀನ್ ನಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಇವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಇವರಿಬ್ಬರಲ್ಲಿ ಓರ್ವ ಬಂಟ್ವಾಳ ತಾಲೂಕಿನ ತುಂಬೆ ಮತ್ತು ಮತ್ತೋರ್ವ ಉಳ್ಳಾಲ ನಿವಾಸಿಯಾಗಿದ್ದಾರೆ.
ಮತ್ತೊಬ್ಬರು ಉಡುಪಿ ಮೂಲದ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇವರು ಮಾರ್ಚ್ 22ರಂದು ದುಬೈನಿಂದ ಬಂದು ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇದ್ದರು. ಇಂದು ಮೂವರಿಗೆ ಕೊರೊನಾ ದೃಢಪಟ್ಟಿರುವುದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12 ಕ್ಕೇರಿದೆ.

error: Content is protected !!