ಉಡುಪಿ: ಹೊಸದಾಗಿ 30 ಮಂದಿ ಕೊರೊನಾ ಶಂಕಿತರು‌ ಪತ್ತೆ

ಉಡುಪಿ: ಜಿಲ್ಲೆಯಲ್ಲಿ ಮತ್ತೆ 30 ಮಂದಿ ಕೊರೊನಾ ಶಂಕಿತರನ್ನು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. 30 ಶಂಕಿತರ ಪೈಕಿ 28 ಮಂದಿ ಪಾಸಿಟಿವ್ ಸಂಪರ್ಕದಲ್ಲಿದ್ದವರಾಗಿದ್ದು, ಒಬ್ಬ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಮತ್ತೊಬ್ಬ ವ್ಯಕ್ತಿ‌ ಸ್ಥಳೀಯನಾಗಿದ್ದಾನೆ ಎಂದು ಹೇಳಿದ್ದಾರೆ. 41 ಮಂದಿಯ ವೈದ್ಯಕೀಯ ವರದಿ ಬರಲು ಬಾಕಿಯಿದೆ. ಈವರೆಗೆ ಜಿಲ್ಲೆಯಲ್ಲಿ ಮೂವರು‌ ಕೊರೊನಾ ಪಾಸಿಟಿವ್ ರೋಗಿಗಳು ಪತ್ತೆಯಾಗಿದ್ದಾರೆ.

ಮಂಗಳೂರು: ನಿಜಾಮುದ್ದೀನ್ ತಬ್ಲಿಘಿ‌ ಜಮಾತ್ ಗೆ ತೆರಳಿದ ಇಬ್ಬರಿಗೆ ಕೊರೊನ

ಮಂಗಳೂರು: ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಗೆ ಹೋದ ಇಬ್ಬರು ಸೇರಿದಂತೆ ದ.ಕ‌.ಜಿಲ್ಲೆಯಲ್ಲಿ‌ ಶನಿವಾರ ಒಟ್ಟು ಮೂವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. 43 ಮತ್ತು 52 ವರ್ಷದ ಇಬ್ಬರು ನಿಜಾಮುದ್ದೀನ್ ನಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಇವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರಿಬ್ಬರಲ್ಲಿ ಓರ್ವ ಬಂಟ್ವಾಳ ತಾಲೂಕಿನ ತುಂಬೆ ಮತ್ತು ಮತ್ತೋರ್ವ ಉಳ್ಳಾಲ ನಿವಾಸಿಯಾಗಿದ್ದಾರೆ. ಮತ್ತೊಬ್ಬರು ಉಡುಪಿ ಮೂಲದ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇವರು ಮಾರ್ಚ್ 22ರಂದು ದುಬೈನಿಂದ […]

ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗೆ ಪರಿಹಾರ ನಿಧಿಗೆ ದೇಣಿಗೆ

ಉಡುಪಿ ಏ.4: ರಾಜ್ಯದ ಗೃಹ ಸಚಿವರು ಹಾಗೂ  ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19 ಗೆ , ಉಡುಪಿ ನಿರ್ಮಿತಿ ಕೇಂದ್ರದ ವತಿಯಿಂದ 1 ಕೋಟಿ ರೂ ಮೊತ್ತದ ಚೆಕ್ ನ್ನು ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ಕಚೇರಿಯಲ್ಲಿ ಹಸ್ತಾಂತರಿಸಿದರು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು.  

ಪೇಜಾವರ ಮಠದಿಂದ 500 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಉಡುಪಿ ಪೇಜಾವರ ಮಠದ ವತಿಯಿಂದ  ಕೊರೊನಾ ಲಾಕ್ ಡೌನ್ ನಿಂದ ನಿರಾಶ್ರಿತರಾದ 500 ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಸಾವಿರ ಮೌಲ್ಯದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಶುಕ್ರವಾರ ವಿತರಿಸಲಾಯಿತು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ಶಾಸಕ ಕೆ. ರಘುಪತಿ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಸುಬ್ರಹ್ಮಣ್ಯ ಭಟ್, ಇಂದುಶೇಖರ್, ಜಿ. ವಾಸುದೇವ ಭಟ್ ಮಹೇಶ ಕುಲಕರ್ಣಿ‌, ಸಂತೋಷ್  ಮೊದಲಾದವರು ಉಪಸ್ಥಿತರಿದ್ದರು . ರೋಹನ್ […]

ಕೋವಿಡ್-19: ಸಗಟು ಮತ್ತು ಚಿಲ್ಲರೆ ವ್ಯಾಪಾರದ ಸರಬರಾಜು ಪ್ರಕ್ರಿಯೆಗೆ ನೋಡಲ್ ಅಧಿಕಾರಿ ನೇಮಕ: ಜಿಲ್ಲಾಧಿಕಾರಿ

ಉಡುಪಿ ಏಪ್ರಿಲ್ 3: ಕೋವಿಡ್-2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144(3) ರಂತೆ ನಿರ್ಬಂಧ ವಿಧಿಸಿ  ಆದೇಶವನ್ನು ಹೊರಡಿಸಲಾಗಿದ್ದು,  ಅದರಂತೆ ಜನರು ಹೊರಗಡೆ ಸಂಚಾರಿಸುವುದನ್ನು ನಿರ್ಬಂಧಿಸಲಾಗಿದೆ. ಮುಂದುವರಿದಂತೆ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವ ಅವಶ್ಯಕತೆ ಕಂಡು ಬಂದ ಹಿನ್ನಲೆಯಲ್ಲಿ ಜನರಿಗೆ  ಅಗತ್ಯವಿರುವ ದಿನಸಿ ಸಾಮಾಗ್ರಿಗಳು ಮತ್ತಿತರ ಅವಶ್ಯಕ ಸಾಮಾಗ್ರಿಗಳನ್ನು ನಿಗದಿತ ಸಮಯದಲ್ಲಿ ಮಾತ್ರ  ಸಾಮಾಜಿಕ ಅಂತರವನ್ನು ಪಾಲಿಸಿ ಖರೀದಿಸಲು ಅವಕಾಶವನ್ನು ನೀಡಿ ಪ್ರತಿದಿನ ಬೆಳಿಗ್ಗೆ 7 ರಿಂದ 11 ರವರೆಗೆ  ಸಮಯವಕಾಶವನ್ನು   ನಿಗದಿಪಡಿಸಿ […]