ಮಂಗಳೂರು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ವಿಶೇಷ ಕಾರ್ಯಚರಣೆ ನಡೆಸುತ್ತಿದ್ದ ವೇಳೆ ನಗರದ ಪಂಪ್‌ವೆಲ್ ಬಳಿ ಅನುಮಾನಾಸ್ಪ ವ್ಯಕ್ತಿಗಳು ಕಂಡು ಬಂದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಸ್ಯಾಮ್ ಪೀಟರ್, ಟಿ.ಕೆ ಬೋಪಣ್ಣ, ಮದನ್, ಚಿನ್ನಪ್ಪ, ಸುನೀಲ್ ರಾಜು, ಕೋದಂಡರಾಮ, ಜಿ.ಮೊಯದ್ದೀನ್, ಎಸ್ ಎ. ಕೆ ಲತೀಫ್ ಬಂಧಿತ ಆರೋಪಿಗಳು.
ಈ ಸಂಬಂಧ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷ ಸುದ್ದಿಗೋಷ್ಢಿ ನಡೆಸಿ ಮಾಹಿತಿ ನೀಡಿದ್ದು,
ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಾವು ಅಲ್ಲಿಗೆ ತೆರಳಿದ್ದಾಗ ಒಂದು ತಂಡ ಕಾರ್‌ನಲ್ಲಿ ಭಾರತ ಸರಕಾರ ನಕಲಿ ಪಲಕ ಅಳವಡಿಸಿದ್ದರು.
ಆದರೆ ನಮ್ಮನ್ನು ನೋಡಿ ಪರಾರಿಯಾಗಲು ಪ್ರಯತ್ನಪಟ್ಟರು. ಅವರೆಲ್ಲರೂ ನಗರದ ಒಂದು ಲಾಡ್ಜ್ ನಲ್ಲಿ ಇದ್ದು ಅಪರಾಧ ಕೃತ್ಯ ಎಸಗುತ್ತಿದ್ದರು ಎಂದರು.
ಸ್ಯಾಮ್ ಪೀಟರ್ ಎಂಬ ವ್ಯಕ್ತಿ ಈ ತಂಡದ ಮುಖಂಡ, ಮೂಲತಃ ಕೇರಳದವನಾಗಿದ್ದು, ಆತನ ತಾಂತ್ರಿಕ ಮಾಹಿತಿ ಸಂಗ್ರಹಿಸುತ್ತಿದ್ದೇವೆ.
ಸರಕಾರಿ ಗನ್ ಮ್ಯಾನ್ ತರ ಪೋಸ್ ಕೊಡುವವರು ಗನ್ ಮ್ಯಾನ್‌ಗಳು ಇವನಿಗೆ ಇದ್ದರು. ಆತನೀಗೆ ಇದ್ದ ಗನ್ ಮ್ಯಾನ್ ಗಳನ್ನು ವಶಕ್ಕೆ ಪಡೆದಿದ್ದೇವೆ.
ಸ್ಥಳೀಯ ಮಂಗಳೂರಿನ ಲತೀಫ್ ಹಾಗೂ ಚೆರಿಯರ್ ಎಂಬುವವರು ಸಹಾಯ ಮಾಡುತ್ತಿದ್ದರು. ಸಹಾಯ ಮಾಡುತ್ತಿದ್ದು, ಅವರನ್ನು ಬಂಧಿಸಲಾಗಿದೆ.
ತಂಡದಲ್ಲಿ ಅಕ್ರಮ ಸಶಸ್ತ್ರ ಏರ್ ಗನ್ ರಿವತ್‌ವಲ್ ಸಾಕಷ್ಟು ತಾಂತ್ರಿಕ ಉಪಕರಣ ಇತ್ತು ಅದನ್ನು ವಶಕ್ಕೆ ಪಡೆದಿದ್ದೇವೆ. ಮಂಗಳೂರು ಪೂರ್ವ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಪ್ರಕರಣವನ್ನು ರಾಷ್ಟ್ರೀಯ ಚೀಟಿಂಗ್ ಗ್ಯಾಂಗ್ ತರ ಕಾಣುತ್ತಿದ್ದೇವೆ. ಗಾಡಿಯಲ್ಲಿ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಮಂಗಳೂರಿನಲ್ಲಿ ಹಣವಂತರನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು. ಲಾಡ್ಜ್ ನಲ್ಲಿ ಇವರು ಎಂಟ್ರಿ ಕೂಡ ಮಾಡಿರಲಿಲ್ಲ. ನಾವು ಬೇರೆ ಬೇರೆ ರೀತಿಯಲ್ಲಿ ತಂಡಗಳಾಗಿ ತನಿಖೆ ಮಾಡುತ್ತಿದ್ದೇವೆ. ಆದಷ್ಟು ಬೇಗ ಇದನ್ನು ತನಿಖೆ ಮಾಡುತ್ತೇವೆ. ಆದ್ಯತೆ ಪ್ರಕರಣ ಅಂತ ತೆಗೆದುಕೊಂಡು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.