ಮಂಗಳೂರು:ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 11ನೇ ವಾರ್ಷಿಕ ಸಾಮಾನ್ಯ ಸಭೆ ಶನಿವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಭಾಸ್ಕರ್ ಎಸ್ ಕೋಟ್ಯಾನ್ ಮಾತನಾಡಿ, ನಮ್ಮ ಸಂಸ್ಥೆಯು ಸರ್ವ ಸದಸ್ಯರ ಮತ್ತು ಠೇವಣಿದಾರರ ಸಹಕಾರದಿಂದ ಉತ್ತಮ ಅಭಿವೃದ್ಧಿ ಸಾಧಿಸಿದೆ. 11,684 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ 1.42 ಕೋಟಿ ರೂ. ಇರುತ್ತದೆ. 45.54 ಕೋಟಿ ರೂ. ಠೇವಣಿ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 46.05 ಕೋಟಿ ರೂ.ಸಾಲ ನೀಡಲಾಗಿದೆ ಎಂದರು. ಸಂಸ್ಥೆಯು 51.48 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 9.50 ಡಿವಿಡೆಂಡ್ ಘೋಷಿಸಿದರು.
ಈಗಾಗಲೇ 11 ಶಾಖೆಗಳನ್ನು ಹೊಂದಿರುವ ಸಂಸ್ಥೆಯು ಮುಂದಿನ ವರ್ಷಗಳಲ್ಲಿ ಅಂಕೋಲಾ, ಮಂಕಿ ಮತ್ತು ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ನಿರ್ದೇಶಕ ರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಎಂ. ವಾದಿರಾಜ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ, ರತ್ನಾಕರ ಶೆಟ್ಟಿ, ಕೆ.ಎಸ್. ದೇವರಾಜ್, ಸುಂದರ ಗೌಡ ಇಚ್ಚಿಲ, ಮೋನಪ್ಪ ಶೆಟ್ಟಿ, ಸುನೀಲ್ ಕುಮಾರ್, ಟಿ. ರಾಘವ ಶೆಟ್ಟಿ, ಕೆ. ಹರಿಶ್ಚಂದ್ರ, ಸಾವಿತ್ರಿ ರೈ, ಎಸ್. ಜಗದೀಶ್ಚಂದ್ರ, ಗುಲ್ಜರ್ ಹುಸೈನ್, ಲೆಕ್ಕಪರಿಶೋಧಕ ಪಿ. ನರೇಂದ್ರ ಪೈ, ರಾಜ್ಯ ಸಂಯುಕ್ತ ಸೌಹಾರ್ದ ಫೆಡರೇಶನ್ ಸಿಡಿಒ ಗುರುಪ್ರಸಾದ್ ಬಂಗೇರ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಕೆ. ಜೈರಾಜ್ ಬಿ. ರೈ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಿಇಒ ಎಸ್.ವಾಸು, ಸಹಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಜನಾರ್ದನ ಕುಡುಪು ಉಪಸ್ಥಿತರಿದ್ದರು.