ಸ್ಮಾರ್ಟ್ ಸಿಟಿ ಬಸ್ಸ್ ಶೆಲ್ಟರ್ ತಂಗುದಾಣ: ವಿಚಾರಣೆ ನಡೆಸಲು ಸಂಸದರ ಸೂಚನೆ

ಮಂಗಳೂರು: ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಡೆಗಳಲ್ಲಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್‍ಗಳ ಯೋಜನಾ ವೆಚ್ಚ ಅಧಿಕವಾಗಿರುವ ಬಗ್ಗೆ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ನಳೀನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ‌ ಮಾತಾನಾಡಿದರು. ಸ್ಮಾರ್ಟ್ ಸಿಟಿಯಡಿ ಪ್ರತಿ ಬಸ್ ಶೆಲ್ಟರ್‍ಗೆ ರೂ. 12 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಈ ಬಸ್ಸ್ ಶೆಲ್ಟರ್‍ನಲ್ಲಿ ವಿನ್ಯಾಸ ಅವೈಜ್ಞಾನಿಕವಾಗಿದೆ. […]

ಶಿಕ್ಷಣದಿಂದ ಜೀವನ ಮೌಲ್ಯಗಳನ್ನು ಕಲಿಯುವುದು ಅಗತ್ಯ: ಪ್ರೊ. ಪಿ.ವಿ.ಕೃಷ್ಣ ಭಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ ಕ್ಷೇತ್ರಕ್ಕೆ ನಾಡಿಗೆ ಮತ್ತು ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಅದರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಹುಮುಖ್ಯ ಪಾತ್ರವಿದೆ ಎಂದು ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯ  ಕುಲಾಧಿಪತಿಗಳಾದ ಪ್ರೊ. ಪಿ.ವಿ. ಕೃಷ್ಣ ಭಟ್ ಶ್ಲಾಘಿಸಿದರು. ಗುರುವಾರ ಮಂಗಳೂರು ವಿವಿಯ 40ನೇ ಯ ಸಂಸ್ಥಾಪನಾ ದಿನಾಚರಣೆಯನ್ನು ವಿವಿಯ ಮಂಗಳ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯು ದೇಶದ ಬ್ಯಾಂಕಿಂಗ್ ಉದ್ಯಮ, ಶಿಕ್ಷಣ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತುಂಬಾ ಮಹತ್ವದ ಕೊಡುಗೆಯನ್ನು […]

ಮೂಡಬಿದಿರೆ: ವಿದ್ಯುತ್ ಶಾಕ್, ಯುವಕ ದುರ್ಮರಣ

ಮೂಡಬಿದಿರೆ: ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ಬೆಳುವಾಯಿಯಲ್ಲಿ ಸಂಭವಿಸಿದೆ. ಮೂಡಬಿದ್ರೆಯ ಬೆಳುವಾಯಿ ನಿವಾಸಿ ಕೀರ್ತಿ(30) ಮೃತಪಟ್ಟ ಯುವಕ. ಬೆಳಗ್ಗೆ ಅಡಿಕೆ ಕೀಳಲೆಂದು ಮರವೇರಿದ್ದ ಯುವಕ ಮರದ ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದರು. ಈ ವೇಳೆ ಮರದಿಂದ ಕೆಳಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ.

ಉಡುಪಿ: ಹೆದ್ದಾರಿ ಬದಿ ಟೆಂಟ್‍ನಲ್ಲಿ ವಾಸವಿದ್ದ ಕುಟುಂಬಗಳ ರಕ್ಷಣೆ

ಉಡುಪಿ: ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್‍ನಲ್ಲಿ ವಾಸವಾಗಿರುವ,  ಮೂಲತಃ ಗದಗದವರಾಗಿರುವ 7 ಜನ ಕೂಲಿ ಕಾರ್ಮಿಕರನ್ನು ಒಳಗೊಂಡಂತೆ 12 ಮಕ್ಕಳನ್ನು ರಕ್ಷಿಸಲು,  ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಮತ್ತು ನಗರ ಪೊಲೀಸ್ ಠಾಣೆ, ಉಡುಪಿ ಇದರ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಅವರಲ್ಲಿ 2 ಮಕ್ಕಳು ಕಾಡಬೆಟ್ಟು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು, ಮಕ್ಕಳು ರಸ್ತೆ ಬದಿಗೆ ಆಟವಾಡಲು ಬರುತ್ತಿದ್ದು, ವಾಹನ ಸಂಚಾರದ ವೇಳೆ ಆಕಸ್ಮಾತ್ತಾಗಿ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಅಲ್ಲಿಂದ ಬೇರೆ […]

ಶ್ರೀ ಕೃಷ್ಣ ಮಠದಲ್ಲಿ ಅನಂತನ ಚತುರ್ದಶಿ ಅಲಂಕಾರ: ಸಂಭ್ರಮದ ಪೂಜೆ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಅನಂತನ ವೃತದ ಪ್ರಯುಕ್ತ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನಂತಪದ್ಮನಾಭ ದೇವರ ಅಲಂಕಾರ ಮಾಡಿದರು,ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆ ಮಾಡಿ ಮಹಾಪೂಜೆ ನೆರವೇರಿಸಿದರು.