ಮಂಗಳೂರು: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧನೆಮಾಡುವ ಉಪನ್ಯಾಸಕರು ಪರಿಣಾಮಕಾರಿ ಬೋಧನ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲ ವಾಗುವಂತೆ ವಾಮಂಜೂರಿನ ಸೈಂಟ್ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡೊ ಯುನಿವರ್ಸಲ್ ಕೊಲಬರೇಶನ್ ಫಾರ್ ಎಂಜಿನಿಯರಿಂಗ್ ಎಜುಕೇಶನ್ (ಐಯುಸಿಇಇ) ಸಹಭಾಗಿತ್ವದಲ್ಲಿ ‘ಸಂಜೋಶ್’ ಎಂಬ ಹೆಸರಿನಲ್ಲಿ ಶಿಕ್ಷಣ ತರಬೇತಿ ಕೇಂದ್ರ (ಟಿಎಲ್ಸಿ)ವನ್ನು ಆರಂಭಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ವಂ| ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ 60 ಮಂದಿ ಉಪನ್ಯಾಸಕರು ಈ ಶಿಕ್ಷಣ ತರಬೇತಿಗೆ ಹೆಸರು ನೋಂದಾಯಿಸಿದ್ದು, 25 ಮಂದಿ ಮೊದಲ ಹಂತದಲ್ಲಿ ತರಬೇತಿ ಪಡೆದಿದ್ದಾರೆ. ಎರಡನೇ ಹಂತದಲ್ಲಿ ಮತ್ತೆ 30 ಮಂದಿ ತರಬೇತಿಯನ್ನು ಮುಗಿಸಿದ್ದಾರೆ. ಮೂರನೇ ಹಂತದಲ್ಲಿ ಆಸುಪಾಸಿನ ಎಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ತರಬೇತಿ ಕೋರ್ಸು ಆಗಸ್ಟ್ 5ರಿಂದ 7ರ ತನಕ ನಡೆಯಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ರಿಯೋ ಡಿ’ಸೋಜಾ ಮಾತನಾಡಿ, ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ತರಬೇತಿ ಆಗಿದ್ದು, ತರಬೇತಿಯನ್ನು ಪೂರ್ತಿಗೊಳಿಸಿದವ ರಿಗೆ ಪ್ರಮಾಣ ಪತ್ರವನ್ನು ನೀಡಲಾಗು ತ್ತಿದೆ. ತರಬೇತಿಯು ಫೇಸ್ ಟು ಫೇಸ್ ಸೆಶನ್‌ಗಳು, ಆನ್‌ಲೈನ್ ಮೋಡ್ಯೂಲ್ಗಳನ್ನು ಒಳಗೊಂಡಿರುತ್ತದೆ ಎಂದರು.
ಐಯುಸಿಇಇ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಕೃಷ್ಣ ವೆದುಲಾ ಅವರು ಮಾತನಾಡಿ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸುಧಾರಣೆ ತರಲು ಮತ್ತು ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಅಮೆರಿಕದ ಡಾ| ರಿಚರ್ಡ್ ಫೆಲ್ಡರ್ ಮತ್ತು ಡಾ| ರೆಬೆಕ್ಕಾ ಬ್ಲೆಂಟ್ ಅವರ ಪರಿಣಾಮಕಾರಿ ಬೋಧನಾ ಕಾರ್ಯಾಗಾರ ಮತ್ತು ಆಸ್ಟ್ರಿಯಾದ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಎಂಜಿನಿಯರಿಂಗ್ ಪೆಡಗೊಗಿ (ಐಜಿಐಒಇ)ಯ ಟೀಚರ್ ಸರ್ಟಿಫಿಕೇಶನ್ ಕೋರ್ಸ್‌ನ್ನು ಆಧರಿಸಿ ಐಯುಸಿಇಇ ಈ ಸರ್ಟಿಫಿಕೇಶನ್ ಕೋರ್ಸನ್ನು ವಿನ್ಯಾಸಗೊಳಿಸಿದೆ. ಭಾರತದ 120 ಎಂಜಿನಿಯರಿಂಗ್ ಕಾಲೇಜುಗಳು ಐಯುಸಿಇಇ ಸದಸ್ಯತ್ವ ಪಡೆದಿವೆ. ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು 2013 ರಿಂದೀಚೆಗೆ ಇದರ ಸದಸ್ಯತ್ವ ಪಡೆದಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಗೋಷ್ಠಿಯಲ್ಲಿ ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಯ ರಾಕೇಶ್ ಲೋಬೊ, ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು.