ಮಂಗಳೂರು: ಕಾಮನ್ ವೆಲ್ತ್ ಗೇಮ್ಸ್ ಪವರ್ ಲಿಪ್ಟಿಂಗ್ ನಲ್ಲಿ ಅವಳಿ ಚಿನ್ನದ ಪದಕ ಪಡೆದ ಋತ್ವಿಕ್ ಅಲೆವೂರಾಯ ಕೆ.ವಿ.ಅವರಿಗೆ ಈ ಬಾರಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಜ. 26ರಂದು ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
ಇವರು ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಮತ್ತು ಏಷ್ಯನ್ ಪವರ್ ಲಿಪ್ಟಿಂಗ್ ನಲ್ಲಿ ನಾಲ್ಕು ಬೆಳ್ಳಿ ಪದಕ ಪಡೆದ ದೀಪಾ ಕೆ.ವಿ. ಅವರ ಪುತ್ರ.