ಮಂಗಳೂರು: ಋತ್ವಿಕ್ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: ಕಾಮನ್ ವೆಲ್ತ್ ಗೇಮ್ಸ್ ಪವರ್ ಲಿಪ್ಟಿಂಗ್ ನಲ್ಲಿ ಅವಳಿ ಚಿನ್ನದ ಪದಕ ಪಡೆದ ಋತ್ವಿಕ್ ಅಲೆವೂರಾಯ ಕೆ.ವಿ.ಅವರಿಗೆ ಈ ಬಾರಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜ. 26ರಂದು ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ. ಇವರು ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಮತ್ತು ಏಷ್ಯನ್ ಪವರ್ ಲಿಪ್ಟಿಂಗ್ ನಲ್ಲಿ ನಾಲ್ಕು ಬೆಳ್ಳಿ ಪದಕ ಪಡೆದ ದೀಪಾ ಕೆ.ವಿ. ಅವರ […]

ಕುಮಾರಸ್ವಾಮಿ ವಿರುದ್ಧ ಅವಹೇಳನ: ಕಠಿಣ ಕ್ರಮಕ್ಕೆ ಯುವಜನತಾ ದಳ ಆಗ್ರಹ

ಮಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಅವಹೇಳನಕಾರಿ ಸಂದೇಶಗಳನ್ನು ಹರಡುತ್ತಿದ್ದು, ಇವರುಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ದ.ಕ.ಜಿಲ್ಲಾ ಯುವ ಜನತಾದಳ ಆಗ್ರಹಿಸಿದೆ. ಈ ಬಗ್ಗೆ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಮಾನ್ಯ ಪೋಲಿಸ್ ಆಯುಕ್ತರಿಗೆ ಮತ್ತು ಸೈಬರ್ ಕ್ರೈಮ್ ಪೋಲಿಸರಿಗೆ ದೂರು ಸಲ್ಲಿಸಲಾಯಿತು. ಅಂಥ ಕಿಡಿಗೇಡಿಗಳನ್ನು ಆದಷ್ಟು ಬೇಗ ಬಂಧಿಸಿ, ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು ಮತ್ತು ಇಂತಹ ಕೃತ್ಯಗಳನ್ನು ನಡೆಸುವ ಸಮಾಜಘತಕ ಶಕ್ತಿಗಳನ್ನು […]

ಶ್ರೀ ಭುವನೇಂದ್ರ ಕಾಲೇಜು: ರೆಡ್ ಕ್ರಾಸ್ ಶಿಬಿರ ಉದ್ಘಾಟನೆ

ಕಾರ್ಕಳ: ಮಾನವತ್ವಕ್ಕೆ ಸಂಬಂಧ ಪಟ್ಟ ಸಂಸ್ಥೆ ರೆಡ್‌ಕ್ರಾಸ್. ಈ ಸಂಸ್ಥೆಯ ಮೂಲಕ ಎಲ್ಲಾ ರೀತಿಯ ಶಿಬಿರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಸೇವೆಯ ಮನೋಭಾವನೆಯನ್ನು ಹೆಚ್ಚಿಸಬೇಕು. ರೆಡ್‌ಕ್ರಾಸ್‌ನ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಸರ್ಕಾರದ ಸಹಕಾರವೂ ಇದೆ. ಈ ಸಂಸ್ಥೆಯು ಜಾತಿ, ಲಿಂಗ, ಮತ ಎಂಬ ಭೇದವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿ ಎಲ್ಲರಿಗೂ ಸೇವೆ ನೀಡುವ ಸಂಸ್ಥೆಯಾಗಿದೆ ಎಂದು ಉಡುಪಿಯ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಮತ್ತು ಇ.ಸಿ ಸದಸ್ಯ ರಾಜೀವ ಶೆಟ್ಟಿ ಹೇಳಿದರು. ಇವರು ಶ್ರೀ ಭುವನೇಂದ್ರ ಕಾಲೇಜಿನ ಯುವ ರೆಡ್‌ಕ್ರಾಸ್ […]

ಆಳ್ವಾಸ್ ಕಾಲೇಜು:”ಬರಹಗಾರರ ಬಳಗ- ಬರವಣಿಗೆಗಾಗಿ ಮೆರವಣಿಗೆ” ಕಾರ್‍ಯಕ್ರಮ

ಮೂಡಬಿದ್ರೆ : ಟೀಕೆ, ವಿಮರ್ಶೆಯನ್ನು ಸ್ವೀಕರಿಸುವವನು ಮಾತ್ರ ನಿಜವಾದ ಬರಹಗಾರನಾಗುತ್ತಾನೆ. ಓದು ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಂಡಲ್ಲಿ ಬರವಣಿಗೆ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ ಎಂದು ಬೆಂಗಳೂರಿನ ಕುವೆಂಪು ಭಾಷಾಭಾರತಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಹೇಳಿದರು. ಆಳ್ವಾಸ್ ಕಾಲೇಜಿನ ಪಿ.ಜಿ ಸೆಮಿನಾರ್ ಹಾಲ್‌ನಲ್ಲಿ ವೃತ್ತಿಪರ ವಾಣಿಜ್ಯ ವಿಭಾಗ ಆಯೋಜಿಸಿದ ”ಬರಹಗಾರರ ಬಳಗ- ಬರವಣಿಗೆಗಾಗಿ ಮೆರವಣಿಗೆ” ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬರವಣಿಗೆಗೆ ವಸ್ತು ಮತ್ತು ವಿಷಯ ಬಹಳ ಮುಖ್ಯ. ಬರಹಗಾರರು ವಿಷಯದ ಬಗ್ಗೆ ಸ್ಥಿತ ಪ್ರಜ್ಞರಾಗಿರಬೇಕು. […]