ಮಂಗಳೂರು: ಕಡೆಗೂ ಉದ್ಘಾಟನೆಗೊಂಡ ಪಂಪ್ವೆಲ್ ಫ್ಲೈ ಓವರ್

ಮಂಗಳೂರು: ಸಾಕಷ್ಟು ಟೀಕೆ, ಟ್ರೋಲ್ ಆಗಿದ್ದ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಡೆಗೂ ಉದ್ಘಾಟನೆಗೊಂಡಿದೆ.
‌ವಾಹನಗಳು ಪ್ಲೈ ಓವರ್‌‌ನಲ್ಲಿ ಓಡಾಟ ಶುರುಮಾಡಿವೆ.
ಕಳೆದ ಹತ್ತು ವರ್ಷಗಳಿಂದ ನಿಧಾನಗತಿಯಲ್ಲಿ ಕಾಮಗಾರಿಯ ನಡೆಯುತ್ತಾ ಕರಾವಳಿಯಲ್ಲಿ ದಾಖಲೆ ಪ್ರಮಾಣದಲ್ಲಿ ಟ್ರೋಲ್ ಗೆ ಪಂಪೈಲ್ ಪ್ಲೈ‌ ಒಳಗಾಗಿತ್ತು. 2013 ರಲ್ಲಿ ಪಂಪೈಲ್ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ತೆರೆದುಕೊಳ್ಳಬೇಕಿತ್ತು.
ಆದರೆ ಹಲವು ಅಡೆ ತಡೆಗಳಿಂದ ಕಾಮಗಾರಿ ಪೂರ್ತಿಯಾಗುವಾಗ ೧೦ ವರ್ಷ ಬೇಕಾಯಿತು. ಫ್ಲೈ ಓವರ್ ಲೋಕಾರ್ಪಣೆಗೊಳಿಸಿ ಮಾತನಾಡಿದ ನಳಿನ್, ಪಂಪ್ ವೆಲ್ ಕಾಮಗಾರಿ ನೆಪದಲ್ಲಿ ಕಾಂಗ್ರೆಸಿಗರು ನಾಟಕ ಮಾಡುತ್ತಿದ್ದಾರೆ. ಪಂಪ್ ವೆಲ್ ಕಾಮಗಾರಿ ಆಗದಂತೆ ಜೆ.ಆರ್.ಲೋಬೊ ಅಡ್ಡಿ ಮಾಡಿದ್ದಾರೆ. ಪಾಲಿಕೆ ಮೂಲಕ ಡಿಸೈನ್ ಚೇಂಜ್ ಮಾಡುವಂತೆ ಪಟ್ಟು ಹಿಡಿದು ಕೂಳಿತಿದ್ದರು.
2016ರ ವರೆಗೂ ಮಹಾನಗರ ಪಾಲಿಕೆಯಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಹಿಂಬಾಗಿಲಿಂದ ಯಾರದ್ದೊ ಕಾಲು ಹಿಡಿದು ಶಾಸಕರಾದವರು ನಾಟಕ ಮಾಡುತ್ತಿದ್ದಾರೆ ಎಂದು ಮಾತಿನುದ್ದಕ್ಕೂ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.
ಇನ್ನೂ 10 ವರ್ಷಗಳ ವಿಲಂಬಕ್ಕೆ ದೇವರನ್ನು ಮಧ್ಯೆ ಎಳೆದು ತಂದು ಕಟೀಲು ಬ್ರಹ್ಮಕಲಶ ನಡೆದ ಮರುದಿನ ಪಂಪೈಲ್ ಲೋಕಾರ್ಪಣೆ ಹಾಗಾಗಿ ಇದು ದೇವರ ಇಚ್ಛೆ ಆಗಿರಬಹುದು ಎಂದು ತಿಳಿಸಿದರು.
ಚಿತ್ರ: ಅಪುಲ್ ಆಲ್ವಾ ಫೋಟೋಗ್ರಫಿ