ನಾಳೆಯಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ

ಉಡುಪಿ : ಗ್ರಾಮೀಣ ಪ್ರದೇಶದಲ್ಲಿ ಹಾಲಿನ ಉತ್ಪಾದನೆಗೆ ಮೇವಿನ ಕೊರತೆ, ರಾಸುಗಳ ಸಾಕಾಣಿಕೆಗೆ ಬಳಸುವ ಪಶು ಆಹಾರದ ಬೆಲೆ, ಸಾಗಾಣಿಕೆ ಮತ್ತು ಸಂಸ್ಕರಣೆ / ಪ್ಯಾಕಿಂಗ್ ವೆಚ್ಚ ದುಬಾರಿ, ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಹಾಗೂ ಹಾಲಿನ ಸಂಗ್ರಹಣೆ ಕಡಿಮೆಯಾಗಿರುವ ನಿಟ್ಟಿನಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸಲು ನಂದಿನಿ ಹಾಲಿನ ಮಾರುಕಟ್ಟೆ ದರವನ್ನು ಹೆಚ್ಚಿಸಿ, ರೈತರಿಗೆ ಉತ್ತಮ ದರ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ ಆದೇಶದಂತೆ ರಾಜ್ಯದಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ […]

ಕೊರೊನಾ ವೈರಸ್ ಭಯ ಬೇಡ, ಆದ್ರೆ ಎಚ್ಚರವಿರಲಿ- ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಇತ್ತೀಚೆಗೆ ಕೇಳಿ ಬರುತ್ತಿರುವ ಕೊರೊನಾ ವೈರಸ್ ನಿಂದ ಹರಡುವ ರೋಗದ ಕುರಿತಂತೆ ಸಾರ್ವಜನಿಕರು ಯಾವುದೇ ಆತಂಕ ಅಥವಾ ಭಯ ಪಡುವ ಅಗತ್ಯವಿಲ್ಲ ಆದರೆ ರೋಗದ ಲಕ್ಷಣಗಳನ್ನು ತಿಳಿದುಕೊಂಡು ಈ ಬಗ್ಗೆ ಎಚ್ಚರ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ, ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕದಲ್ಲಿ ಇದುವರೆಗೂ ಕೊರೊನಾ ವೈರಸ್ ಸೋಂಕಿತ ಯಾವುದೇ ಪ್ರಕರಣ ವರದಿಯಾಗಿಲ್ಲ, ಆದರೂ ಸಹ ನೆರೆಯ […]

ಸರ್ಕಾರಿ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನ : ವಿ.ವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ

ಉಡುಪಿ : ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ಮಂಗಳೂರು ವಿವಿ ವ್ಯಾಪ್ತಿಯ ಸರಕಾರಿ ಕಾಲೇಜುಗಳನ್ನು ಮೇಲ್‍ಸ್ಥರಕ್ಕೇರಿಸುವ ನೈತಿಕ ಜವಬ್ದಾರಿ ನನ್ನ ಮೇಲಿದೆ ಎಂದು ಮಂಗಳೂರು ವಿಶ್ವವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಹೇಳಿದರು. ಅವರು ಶುಕ್ರವಾರ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡಿನಲ್ಲಿ ಟೀಚರ್ ಕೋ ಅಪರೇಟಿವ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಮಲಬಾರ್ ಗೋಲ್ಡ್, ಬಿಬ್ಲಿಯೋಸ್ ಬುಕ್ ಪಾಯಿಂಟ್ ಸುರತ್ಕಲ್ ಇವರ ಪ್ರಾಯೋಜಕತ್ವದಲ್ಲಿ […]

ಮಂಗಳೂರು: ಕಡೆಗೂ ಉದ್ಘಾಟನೆಗೊಂಡ ಪಂಪ್ವೆಲ್ ಫ್ಲೈ ಓವರ್

ಮಂಗಳೂರು: ಸಾಕಷ್ಟು ಟೀಕೆ, ಟ್ರೋಲ್ ಆಗಿದ್ದ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಡೆಗೂ ಉದ್ಘಾಟನೆಗೊಂಡಿದೆ. ‌ವಾಹನಗಳು ಪ್ಲೈ ಓವರ್‌‌ನಲ್ಲಿ ಓಡಾಟ ಶುರುಮಾಡಿವೆ. ಕಳೆದ ಹತ್ತು ವರ್ಷಗಳಿಂದ ನಿಧಾನಗತಿಯಲ್ಲಿ ಕಾಮಗಾರಿಯ ನಡೆಯುತ್ತಾ ಕರಾವಳಿಯಲ್ಲಿ ದಾಖಲೆ ಪ್ರಮಾಣದಲ್ಲಿ ಟ್ರೋಲ್ ಗೆ ಪಂಪೈಲ್ ಪ್ಲೈ‌ ಒಳಗಾಗಿತ್ತು. 2013 ರಲ್ಲಿ ಪಂಪೈಲ್ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ತೆರೆದುಕೊಳ್ಳಬೇಕಿತ್ತು. ಆದರೆ ಹಲವು ಅಡೆ ತಡೆಗಳಿಂದ ಕಾಮಗಾರಿ ಪೂರ್ತಿಯಾಗುವಾಗ ೧೦ ವರ್ಷ ಬೇಕಾಯಿತು. ಫ್ಲೈ ಓವರ್ ಲೋಕಾರ್ಪಣೆಗೊಳಿಸಿ ಮಾತನಾಡಿದ ನಳಿನ್, ಪಂಪ್ ವೆಲ್ ಕಾಮಗಾರಿ ನೆಪದಲ್ಲಿ […]

ಆಗುಂಬೆ ಘಾಟಿ ಏಳನೆಯ ಕ್ರಾಸ್‌ನಲ್ಲಿ ಹೆಣ್ಣು ಮಗು ಪತ್ತೆ!

ತೀರ್ಥಹಳ್ಳಿ: ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೆಯ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿದೆ. ನಿನ್ನೆ ರಾತ್ರಿ ಒಂಭತ್ತೂವರೆ ಸಮಯದಲ್ಲಿ ಕಾರೊಂದು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿರುವಾಗ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗುವೊಂದು ಅಳುತ್ತಾ ನಿಂತಿರುವುದನ್ನು ನೋಡಿ ಕಾರು ಚಾಲಕ ತಕ್ಷಣ ಇಳಿದು ಮಗುವನ್ನು ಕರೆದುಕೊಂಡು ಹೋಗಿ ಆಗುಂಬೆ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗು ಆಗುಂಬೆ ಠಾಣೆಯಲ್ಲಿ ಸುರಕ್ಷಿತವಾಗಿತ್ತು. ಮಗುವಿನ ಪೋಷಕರು ಯಾರು ಎಂದು ಪೊಲೀಸರು ಪತ್ತೆಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು […]