udupixpress
Home Trending ಮಂಗಳೂರು: ಕರ್ತವ್ಯ ನಿರತ ಪೊಲೀಸರಿಗೆ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಮಾಸ್ಕ್

ಮಂಗಳೂರು: ಕರ್ತವ್ಯ ನಿರತ ಪೊಲೀಸರಿಗೆ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಮಾಸ್ಕ್

ಮಂಗಳೂರು: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ‌ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಮಾಸ್ಕ್ ಒದಗಿಸಲಾಗಿದೆ.
ಹೆಲ್ಮೆಟ್ ಮುಂಭಾಗದ ಗ್ಲಾಸ್ ಮಾದರಿಯಲ್ಲಿ ಒಎಚ್ ಪಿ ಶೀಟ್ ಗಳಿಂದ ಫೇಸ್ ಶೀಲ್ಡ್ ತಯಾರಿಸಲಾಗಿದ್ದು, ಇದು ಎದುರಿನಲ್ಲಿರುವ ವ್ಯಕ್ತಿ ಮಾತನಾಡುವಾಗ, ಸೀನುವಾಗ, ಕೆಮ್ಮುವಾಗ ಹೊರ ಬರುವ ಹನಿಗಳು ಮುಖಕ್ಕೆ ರಾಚದಂತೆ ತಡೆಯುತ್ತದೆ.
ಈ ಮಾಸ್ಕ್ ಗಳನ್ನು ಸಂಸ್ಥೆಯೊಂದು ಪೊಲೀಸ್ ಕಮಿಷನರ್ ಕಚೇರಿಗೆ ಕೊಡುಗೆಯಾಗಿ ನೀಡಿದ್ದು, ಆಯ್ದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಒದಸಲಾಗಿದೆ. ಪೋಲಿಸ್ ರು ಕಡ್ಡಾಯವಾಗಿ ಈ ಪೇಸ್ ಶಿಲ್ಡ್ ಮಾಸ್ಕ್ ದರಿಸಿ ಕರ್ತವ್ಯ ನಿರ್ವಹಿಸಲು ಪೋಲಿಸ್ ಇಲಾಖೆ ಸೂಚನೆ ನೀಡಿದೆ.