ಮಂಗಳೂರು: ಮಾದಕ ವಸ್ತು ಮಾರಾಟ; ಇಬ್ಬರ ಬಂಧನ

ಮಂಗಳೂರು: ಮಾದಕ ವಸ್ತು ಎಂ.ಡಿ.ಎಂ.ಎ ಪೌಡರನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು  ಬಂಧಿಸಿ ಘಟನೆ ಮಂಗಳೂರಿನ‌ ಚಿಲಿಂಬಿಯಲ್ಲಿ ನಡೆದಿದೆ.

ಮುಹಮ್ಮದ್ ನಿಯಾಝ್, ಮುಹಮ್ಮದ್ ಅಜೀಂ ಬಂಧಿತರು. ಮಂಗಳೂರಿನ ಉರ್ವ ಚಿಲಿಂಬಿ ಶಿರ್ಡಿ ಸಾಯಿ ಮಂದಿರದ ಕಡೆಯಿಂದ ಹಾದು ಹೋಗುವ ರಸ್ತೆಯಲ್ಲಿ ಆಲ್ಟೋ ಕಾರಲ್ಲಿ ಕುಳಿತು ಎಂ.ಡಿ.ಎಂ.ಎ ಪೌಡರ್ ಮಾರಾಟ ಮಾಡಲು ಗಿರಾಕಿಗಳನ್ನು ಕಾಯುತ್ತಿದ್ದರು. ಇದೇ ವೇಳೆ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ದಾಳಿ ನಡೆಸಿದ್ದಾರೆ.
4.80 ಗ್ರಾಂ. ತೂಕದ ಎಂ.ಡಿ.ಎಂ.ಎ.ಪೌಡರ್, ಮೆರೂನ್ ಬಣ್ಣದ ಆಲ್ಟೋ ಕಾರು, ಮೂರು ಮೊಬೈಲ್ ಹಾಗೂ ನಗದು 3000 ಅನ್ನು ವಶಪಡಿಸಿಕೊಳ್ಳಲಾಗಿದೆ.
ಸ್ವಾಧೀನ ಪಡಿಸಿಕೊಂಡ ಸೊತ್ತಿನ ಒಟ್ಟು ಅಂದಾಜು ಮೌಲ್ಯ 2,08,500. ಈ ಬಗ್ಗೆ  ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.