ಮಂಗಳೂರು: ಪ್ರಗತಿಪರ ಕೃಷಿಕ, ಮಾಜಿ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ (94 ) ಅಲ್ಪ ಕಾಲದ ಅಸೌಖ್ಯದಿಂದ ಭಾನಿವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಮೂವರು ಗಂಡು, ಓರ್ವ ಹೆಣ್ಣು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ದೇವಣ್ಣ ಶೆಟ್ಟಿ ಅವರು ಯಕ್ಷಗಾನ ಕಲಾವಿದರಾಗಿದ್ದು ಸುರತ್ಕಲ್ ಮಹಮ್ಮಾಯಿ ಮೇಳ ಸಹಿತ ಬೇರೆ ಬೇರೆ ಮೇಳಗಳಲ್ಲಿ ಕಲಾ ಸೇವೆ ಮಾಡಿದ್ದಾರೆ.
ತಾಲೂಕು ಬೋಡ್೯ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸುರತ್ಕಲ್ ಪಟ್ಟಣ ಪ್ರದೇಶ ಗ್ರೇಟರ್ ಮಂಗಳೂರಿಗೆ ಸೇರ್ಪಡೆ ಸಂದರ್ಭದಲ್ಲಿ ಪ್ರಥಮ ಮೇಯರ್ ಆಗಿ ಆಯ್ಕೆ ಆಗಿದ್ದ ದೇವಣ್ಣ ಶೆಟ್ಟಿ ಅವರು ಪುರಭವನವನ್ನು ನವೀಕೃತಗೊಳಿಸಿ ಕಲಾವಿದರಿಗೆ ಪುರಭವನವನ್ನು ಕಡಿಮೆ ಬಾಡಿಗೆ ದರದಲ್ಲಿ ನೀಡಿದ್ದರು.
ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ದೇವಣ್ಣ ಶೆಟ್ಟಿ ಅವರು ಕುಳಾಯಿಯಲ್ಲಿ ಭಾರತಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಂಸ್ಥಾಪಕರಾಗಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಮಂಗಳವಾರ ಕುಳಾಯಿಯಲ್ಲಿ ನಡೆಯಲಿದೆ.