ಮಂಗಳೂರು: ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಸುಮ್ಮನೆ ಸುದ್ದಿ ಹರಿದಾಡುತ್ತಿದೆ ಅಷ್ಟೇ. ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ಆರ್. ಅಶೋಕ್ ಅವರು ಅನಾರೋಗ್ಯದ ಕಾರಣದಿಂದ ಬರಲಿಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ನಳಿನ್ ಒಂದು ಸಾವಿರ ಕೋಟಿ ತಂದ್ರೆ ಅದು ಸುದ್ದಿಯೇ ಆಗುವುದಿಲ್ಲ. ಸುದ್ದಿ ಆಗುವುದು ನೆಗೆಟಿವ್ ಅಂಶ ಇದ್ದಾಗ ಮಾತ್ರ. ರಾಜಕೀಯದಲ್ಲಿ ಇದೆಲ್ಲ ಸಹಜ, ಹಾಗಾಗಿ ರಾಜಕೀಯದಲ್ಲಿ ಮಸಾಲೆಬೇಕು ಇಲ್ಲದಿದ್ದರೆ ಅದು ಸುದ್ದಿಯಾಗುವುದೇ ಇಲ್ಲ, ಇದಕ್ಕಾಗಿ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದರು.












