ಕಳತ್ತೂರು: ಹೆಂಡತಿ ಮನೆ ಬಿಟ್ಟು ಹೋದ ಕೊರಗಿನಿಂದ ಖಿನ್ನನಾದ ಪತಿ ನೇಣಿಗೆ ಶರಣಾದ ಘಟನೆ ಕಾಪು ತಾಲೂಕಿನ ಕಳತ್ತೂರಿನಲ್ಲಿ ಮೇ.16 ರಂದು ನಡೆದಿದೆ.
ಕಳತ್ತೂರಿನ ನಿವಾಸಿ 38 ವರ್ಷದ ಸುನೀಲ್ ದೇವಪ್ರಸಾದ ಸೋನ್ಸ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು, ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಹೆಂಡತಿ ಪತಿಯನ್ನು ತೊರೆದು ಮನೆ ಬಿಟ್ಟು ಹೋಗಿದ್ದರು. ಈ ಕೊರಗಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಸುನೀಲ್, ಮೇ.16 ರಂದು ಮಧ್ಯಾಹ್ನ ಮನೆಯ ಮಾಡಿನ ಜಂತಿಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












