ಇಂದಿನಿಂದ ಮಲ್ಪೆ ಸೈಂಟ್ ಮೆರೀಸ್ ದ್ವೀಪ ಪ್ರವಾಸಿಗರಿಗೆ ಮುಕ್ತ

ಮಲ್ಪೆ: ಮಳೆಗಾಲದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದ್ದ ಇಲ್ಲಿನ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಬೋಟ್ ಗಳ ಸಂಚಾರವನ್ನು ಇಂದಿನಿಂದ(ಅ.19) ಪ್ರಾರಂಭಿಸಲಾಗಿದೆ.

ಇಲ್ಲಿನ ಸೀ-ವಾಕ್ ಪ್ರದೇಶದ ಬಳಿ 4 ದೋಣಿಗಳು ಎಲ್ಲ ರೀತಿಯ ಸುರಕ್ಷಾ ಸಲಕರಣೆಗಳೊಂದಿಗೆ ಸಜ್ಜಾಗಿ ಪ್ರವಾಸಿಗರ ಸೇವೆಗೆ ಲಭ್ಯವಿದೆ ಎಂದು ಬೋಟ್ ಗಳ ಮುಖ್ಯಸ್ಥ ಗಣೇಶ್ ಮಲ್ಪೆ ತಿಳಿಸಿದ್ದಾರೆ.