ಕಾಡಾನೆ ದಾಳಿಗೆ ರೈತ ಬಲಿ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪರಿಶೀಲನೆ :ಮೈಸೂರು

ಮೈಸೂರು: ಜಿಲ್ಲೆಯಲ್ಲಿ ಮಾನವ-ಕಾಡುಪ್ರಾಣಿಗಳ ಸಂಘರ್ಷ ಮುಂದುವರೆದಿದೆ. ಕಾಡಾನೆ ದಾಳಿಗೆ ರೈತ ಬಲಿಯಾಗಿರುವ ಘಟನೆ ಗುರುವಾರ ಸರಗೂರು ತಾಲೂಕಿನ ನಡಹಾಡಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.ಕಾಡಾನೆ ದಾಳಿಗೆ ರೈತ ಸಾವಿಗೀಡಾಗಿರುವ ಘಟನೆ ಮೈಸೂರಿನ ಸರಗೂರು ತಾಲೂಕಿನ ನಡಹಾಡಿ ಗ್ರಾಮದಲ್ಲಿ ನಡೆದಿದೆ. ಪದೇ ಪದೇ ಕಾಡು ಪ್ರಾಣಿಗಳ ದಾಳಿಯಿಂದ ಗ್ರಾಮಸ್ಥರು ನಲುಗಿ ಹೋಗಿದ್ದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೇಗೌಡರ ಕುಟುಂಬಕ್ಕೆ ಪರಿಹಾರ ನೀಡುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದರು. ಡಿವೈಎಸ್ಪಿ ಗೋಪಾಲಕೃಷ್ಣ, ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ಸ್ಥಳದಲ್ಲಿದ್ದರು.ರೈತ ಚಿಕ್ಕೇಗೌಡ ಮೃತಪಟ್ಟಿದ್ದಾರೆ. ಬೆಳಿಗ್ಗೆ ತಮ್ಮ ಜಮೀನಿನ […]

ನಿರೀಕ್ಷೆ ಮೀರಿದ ಸಾಧನೆ : ಅರ್ಧ ಶತಕೋಟಿ ಕಂಪ್ಯೂಟರ್​ಗಳಲ್ಲಿ ಓಡುತ್ತಿದೆ ವಿಂಡೋಸ್​ 11 ಓಎಸ್​

ನವದೆಹಲಿ: ಮೈಕ್ರೋಸಾಫ್ಟ್​ನ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಪ್ರಸ್ತುತ 400 ದಶಲಕ್ಷಕ್ಕೂ ಹೆಚ್ಚು ಇನ್​ಸ್ಟಾಲ್ ಆಗಿದ್ದು, 2024 ರ ಆರಂಭದಲ್ಲಿ ಈ ಸಂಖ್ಯೆ 500 ಮಿಲಿಯನ್ ತಲುಪುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ವಿಂಡೋಸ್ 11 ಈಗ ಸುಮಾರು ಅರ್ಧ ಶತಕೋಟಿ ಸಾಧನಗಳಲ್ಲಿ ಸಕ್ರಿಯವಾಗಿದೆ, ಇದು ಕಂಪನಿಯ ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ ಎಂದು ಮೈಕ್ರೋಸಾಫ್ಟ್ ಆಂತರಿಕ ಡೇಟಾ ಉಲ್ಲೇಖಿಸಿ ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ.ವಿಂಡೋಸ್​ 11 ಆಪರೇಟಿಂಗ್ ಸಿಸ್ಟಂ ವಿಶ್ವದ 400 ದಶಲಕ್ಷಕ್ಕೂ ಹೆಚ್ಚು ಕಂಪ್ಯೂಟರ್​ಗಳಲ್ಲಿ ಇನ್​ಸ್ಟಾಲ್ ಆಗಿದೆ. […]

ಡಾಲಿ ಪಿಕ್ಚರ್ಸ್​ನಡಿ ನನಗೂ ಅವಕಾಶ ಕೊಡಿ- ದರ್ಶನ್​ ; ಟಗರು ಪಲ್ಯ’ ಟ್ರೇಲರ್​ ಬಿಡುಗಡೆ

ಬೆಂಗಳೂರು: ಡಾಲಿ ಧನಂಜಯ್​ ನಿರ್ಮಾಣದ ಮೂರನೇ ಸಿನಿಮಾ ‘ಟಗರು ಪಲ್ಯ’ದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಾಲಿ ಧನಂಜಯ್​ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಿಡುಗಡೆಗೊಳಿಸಿದರು. ಡಾಲಿ ಧನಂಜಯ್​ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಿಡುಗಡೆಗೊಳಿಸಿದರು.ಟ್ರೇಲರ್​ ಬಿಡುಗಡೆಗೊಳಿಸಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಿರಿಯ ನಟರಾದ ತಾರಾ, ರಂಗಾಯಣ ರಘು, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ […]

6 ವರ್ಷಗಳಲ್ಲಿ 3.6 ಬಿಲಿಯನ್ ಕಿಮೀ ಪಯಣಿಸಲಿದೆ ಈ ನೌಕೆ : ಸೈಕ್ ಕ್ಷುದ್ರಗ್ರಹ ಅಧ್ಯಯನ

ಸಿಡ್ನಿ : ಸೈಕ್ ಎಂಬ ಕ್ಷುದ್ರಗ್ರಹವನ್ನು ಅಧ್ಯಯನ ಮಾಡಲು ನಾಸಾ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.ಸೈಕ್ ಇದುವರೆಗೆ ಕಂಡುಹಿಡಿಯಲಾದ 16 ನೇ ಕ್ಷುದ್ರಗ್ರಹ: ಸೌರವ್ಯೂಹದಲ್ಲಿ ಕಾಣಿಸುವ ನಮಗೆ ಗೊತ್ತಿರದ ಮತ್ತು ಪದೇ ಪದೆ ಕಾಣಿಸಿಕೊಳ್ಳದ ಆಕಾಶಕಾಯಗಳನ್ನು ನಾವು ಧೂಮಕೇತುಗಳು ಎಂದು ಕರೆಯುತ್ತೇವೆ. ಮಂಗಳ ಮತ್ತು ಗುರುಗ್ರಹದ ಕಕ್ಷೆಗಳ ನಡುವಿನ ಕ್ಷುದ್ರಗ್ರಹ ಪಟ್ಟಿಯು ಕುಬ್ಜ ಗ್ರಹ ಸೆರೆಸ್ ನಿಂದ ಹಿಡಿದು ಸಣ್ಣ ಕಲ್ಲುಗಳು ಮತ್ತು ಧೂಳಿನ ಕಣಗಳವರೆಗೆ ಗಾತ್ರದಲ್ಲಿ ಲಕ್ಷಾಂತರ ಬಾಹ್ಯಾಕಾಶ ಬಂಡೆಗಳನ್ನು ಹೊಂದಿದೆ ಎಂಬುದು ಇಂದು ನಮಗೆ ತಿಳಿದಿದೆ. […]

ಶಿವಣ್ಣನ ಹಾಡಿನ ಮೋಡಿಗೆ ಕುಣಿದು ಕುಪ್ಪಳಿಸಿದ ಯುವಕರು : ಮೈಸೂರು ಯುವ ದಸರಾ

ಮೈಸೂರು : ಝಗಮಗಿಸುವ ಬೆಳಕಿನ ನಡುವೆ ಡಾ. ಶಿವರಾಜ್ ಕುಮಾರ್ ಅವರ ಓಂ ಚಿತ್ರದ ಮಾಸ್ ಡೈಲಾಗ್, ಮನಮೋಹಕ ನೃತ್ಯ, ಶರಣ್ ಅವರ ಗಾಯನ, ಚಿತ್ರ ನಟ ಸಾಧು ಕೋಕಿಲ ಹಾಸ್ಯಕ್ಕೆ ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು. ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಶರಣ್, ದಿವ್ಯ ರಾಮಚಂದ್ರ, ಬಿಗ್​ಬಾಸ್ ಖ್ಯಾತಿಯ ಕಿಶನ್, ಹಾಸ್ಯ ನಟ ಸಾಧುಕೋಕಿಲ ಯುವ ಸಮೂಹಕ್ಕೆ ಮನರಂಜನೆ ನೀಡಿದರು. ನಟ ಶಿವರಾಜ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಯುವ ದಸರಾವನ್ನು […]