ಉಡುಪಿ: ಮಲ್ಪೆ ಕಡಲ ಕಿನಾರೆಯನ್ನು ಸ್ಪೋಟಿಸುವುದಾಗಿ ಯುವಕನೋರ್ವ ಬೆದರಿಕೆವೊಡ್ಡಿರುವ ವೀಡಿಯೋ ತುಣಕುವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಲ್ಪೆಯ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.
1 ನಿಮಿಷ 24 ಸೆಕೆಂಡ್ನ ಈ ವೀಡಿಯೋದಲ್ಲಿ ಮುಖಕ್ಕೆ ಬಟ್ಟೆಕಟ್ಟಿಕೊಂಡಿರುವ ಯುವಕನೊಬ್ಬ ಹಿಂದಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾನೆ. ವೀಡಿಯೋದ ಆರಂಭದಲ್ಲಿ ಪಾಕಿಸ್ತಾನದ ಪರವಾಗಿ ಜೈಕಾರ ಘೋಷಣೆ ಕೂಗುವ ಆತ, ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್ ಅಲ್ಲಿನ ಜನರು ಬಹಳ ಕೆಟ್ಟವರು. ಅಲ್ಲಿ ಬಹಳ ದೊಡ್ಡ ಪ್ರಮಾಣದ ಬಾಂಬ್ ಸ್ಪೋಟಿಸುತ್ತೇವೆ, ಎಲ್ಲವನ್ನು ಸರ್ವನಾಶ ಮಾಡುತ್ತೇವೆ. ಬೀಚ್ ಬದಿಯ ಅಂಗಡಿಗಳನ್ನು ಬಾಂಬ್ ಹಾಕಿ ಉಡಾಯಿಸುತ್ತೇವೆ ಎಂದಿದ್ದಾನೆ. ಅಲ್ಲದೆ ಅವ್ಯಚ್ಚ ಶಬ್ಧಗಳಿಂದ ನಿಂದಿಸಿದ್ದಾನೆ.
ಮಾ. 3 ರಂದು ಮಲ್ಪೆಯಲ್ಲಿ ನಡೆಯುವ ಪಾಂಚಜನ್ಯ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಯುವಕ ಈ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋ ಮಾಡಿದಾತ ಮಾನಸಿಕ ಅಸ್ವಸ್ಥ:
ಪೊಲೀಸರ ಸ್ಪಷ್ಟನೆ ಬೀಚ್ ಸ್ಪೋಟದ ವೀಡಿಯೋ ತುಣುಕು ಹರಿಬಿಟ್ಟಿರುವ ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ತಮಾಷೆ ಮಾಡುವ ಉದ್ದೇಶದಿಂದ ಚಿತ್ರೀಕರಣ ಮಾಡಿದ್ದಾನೆ ಎಂದು ಪೋಲಿಸರು ಸ್ಪಷ್ಟಪಡಿಸಿದ್ದಾರೆ. ಮಲ್ಪೆ ಮೂಲದ ಯುವಕನಾಗಿರುವ ಈತನ ವಿಚಾರಣೆಗೆ ಒಳಪಡಿಸಲಾಗಿದೆ. ಕುಟುಂಬಸ್ಥರ ಹೇಳಿಕೆ ಪಡೆದ ಬಳಿಕ ಇದು ಕೆಟ್ಟ ಉದ್ದೇಶದಿಂದ ಮಾಡಿದ್ದಲ್ಲ ಎಂದು ತಿಳಿಸಿದ್ದಾರೆ.