ಮಲ್ಪೆ: ಚೂರಿಯಿಂದ ಇರಿದು ಮೀನುಗಾರನ ಕೊಲೆಗೆ ಯತ್ನ; ದೂರು ದಾಖಲು

ಮಲ್ಪೆ: ಕ್ಷುಲಕ ಕಾರಣಕ್ಕಾಗಿ ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕನೋರ್ವ ಸಹ ಕಾರ್ಮಿಕನಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.

ಒರಿಸ್ಸಾ ಮೂಲದ ಅಧಿಕಾಂತ ಮಲ್ಲಿಕ್ ಹಾಗೂ ಅರುಣ್ ಮಲ್ಲಿಕ್ ಎಂಬವರು ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇವರ ಮಧ್ಯೆ ಕೆಲದಿನಗಳಿಂದ ಮೊಬೈಲ್ ವಿಚಾರಕ್ಕೆ ಸಂಬಂಧಿಸಿ ವೈಮನಸ್ಸು ಉಂಟಾಗಿತ್ತು. ಬುಧವಾರ ರಾತ್ರಿ ಈ ವಿಚಾರ ವಿಕೋಪಕ್ಕೆ ತಿರುಗಿದ್ದು, ಅರುಣ್ ತನ್ನ ಸಹ ಕಾರ್ಮಿಕನಾದ ಅಧಿಕಾಂತ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾನೆ.

ಈ ವೇಳೆ ಅಧಿಕಾಂತ ತಪ್ಪಿಸಿಕೊಂಡು ಓಡಿಹೋಗಿದ್ದು, ಬಳಿಕ ಮರದ ತುಂಡಿನಿಂದ ಅರುಣ್ ತಲೆಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.