ಕಾರ್ಕಳ : ಭಾರಿ ಮಳೆಗೆ ಅಲ್ಲಲ್ಲಿ ಗುಡ್ಡಗಳು ಜರಿಯುತ್ತಿರುವುದರಿಂದ ಮಾಳಘಾಟ್ ನಿಂದ ಎರಡು ಕಿ.ಮೀ ದೂರದಲ್ಲಿನ ಅಬ್ಬಾಸ್ ಕಟ್ಟಿಂಗ್ ಸಮೀಪದ ಓಟೆಹಳ್ಳ ನದಿಯ ಬಳಿಯ ಗುಡ್ಡವೊಂದು ಜರಿದು ಬೀಳುತ್ತಿರುವ ಪರಿಣಾಮವಾಗಿ ಮುಂಜಾಗ್ರತಾ ಕ್ರಮವಾಗಿ ಮಾಳ ಕಳಸ ಶೃಂಗೇರಿ ಸಂಚಾರವನ್ನು ಸಂಚಾರವನ್ನು ಬಂದ್ ಮಾಡಲಾಗಿದೆ.
ಶೃಂಗೇರಿ ಚಲಿಸಲು ಆಗುಂಬೆ ಮಾರ್ಗವಾಗಿ ಸಂಚರಿಸಬಹುದು, ಭಾರಿ ಗಾತ್ರದ ವಾಹನಗಳು ಸಿದ್ದಾಪುರ ಮಾಸ್ತಿಕಟ್ಟೆ ಮಾರ್ಗವಾಗಿ ಸಂಚರಿಸಬಹುದು.