ಕಳೆದ ಬಾರಿ ಕೊರೊನಾ ಪರಿಸ್ಥಿತಿ ಬಿಗಡಾಯಿಸಿದಾಗ ರಾಷ್ಟ್ರ ವ್ಯಾಪಿಯಾಗಿ ಲಾಕ್ ಡೌನ್ ಜಾರಿಗೊಳಿಸಿಲಾಯಿತು. ಆಗ ಕೇಂದ್ರ ಸರಕಾರದ ನಿರ್ಣಯದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ರಾಷ್ಟೀಕೃತ ಬ್ಯಾಂಕುಗಳಿಗೆ ನಿರ್ದೇಶನ ನೀಡಿ ಬ್ಯಾಂಕ್ ಗಳಲ್ಲಿ ಯಾರೆಲ್ಲ ಸಾಲ ಪಡೆದಿದ್ದಾರೊ ಅವರಿಗೆ ಕಂತುಗಳ ಮರುಪಾವತಿಗೆ ಕಾಲಾವಕಾಶ ನೀಡಿ ಸಾಲಗಾರರಿಗೆ ಮರು ಜೀವ ನೀಡಿತ್ತು.
ಆದರೆ ಈ ಬಾರಿ ಕೊರೊನಾ ಇನ್ನಷ್ಟು ಬಿಗಡಾಯಿಸಿ ಲಾಕ್ ಡೌನ್ ಜನತಾ ಕಫ್ಯೂ೯ ಮುಂತಾದ ನಿರ್ಬಂಧದಿಂದಾಗಿ ಜನಸಾಮಾನ್ಯರ ಬದುಕು ವ್ಯವಹಾರಗಳೇ ಯಾರು ಊಹಿಸಲಾರದ ಮಟ್ಟಿಗೆ ಅದೇೂಗತಿಗೆ ತಲುಪಿದೆ. ಈ ಮಧ್ಯದಲ್ಲಿ ಬ್ಯಾಂಕ್ ಗಳಿಂದ ಸಣ್ಣ ಪುಟ್ಟ ವ್ಯಾಪಾರ ವ್ಯವಹಾರಗಳಿಗಾಗಿ ಪಡೆದುಕೊಂಡ ಸಾಲಗಳನ್ನು ಕಟ್ಟಲಾರದ ಚಿಂತಾಜನಕ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.
ಗಾಯದ ಮೇಲೆ ಬರೆ ಎಳೆಯುವಂತೆ ಬ್ಯಾಂಕುಗಳು ಕೂಡಾ ನಿರ್ದಾಕ್ಷಿಣ್ಯವಾಗಿ ಸಾಲಗಾರರಿಗೆ ನೇೂಟಿಸ್ ಜಾರಿಗೊಳಿಸಿ ಸಾಲಗಾರರ ಕುತ್ತಿಗೆ ಹಿಂಡುವ ಕೆಲಸವನ್ನು ಮಾಡಲು ಮುಂದಾಗುತ್ತಿವೆ.
ಗ್ರಾಹಕರು ಬ್ಯಾಂಕ್ ಗಳಲ್ಲಿ ತಮ್ಮ ಕಷ್ಟ ನಿವೇದಿಸಿ ಕೊಂಡರೇ ನಾವೇನು ಮಾಡಲು ಸಾಧ್ಯವಿಲ್ಲ. ಏನಿದ್ದರೂ ಕೇಂದ್ರ ಹಾಗೂ ರೀಸರ್ವ್ ಬ್ಯಾಂಕ್ ನಿಂದ ನಮಗೆ ನಿರ್ದೇಶನ ಬರಬೇಕು ಅನ್ನುವ ಅಸಹಾಯಕತೆಯನ್ನು ಅವರು ತೇೂಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆದ ಸಾಲಗಾರರ ಬದುಕಿನ ನೇೂವುವನ್ನು ಯಾರು ಕೇಳುವವರಿಲ್ಲ ಅನ್ನುವುದು ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಗಾರರ ಚಿಂತಾಜನಕ ಸ್ಥಿತಿ.
ಕೇಂದ್ರ ಸರ್ಕಾರ ಈ ಬಾರಿಯ ಲಾಕ್ ಡೌನ್ ಹೇರುವ ನಿರ್ಧಾರವನ್ನು ಆಯಾಯ ರಾಜ್ಯಗಳಿಗೆ ಬಿಟ್ಟ ಕಾರಣ ಸ್ಥಳೀಯ ಸಮಸ್ಯೆ ಗಳಿಗೆ ಆಯಾಯ ರಾಜ್ಯಗಳೇ ನಿಧಾ೯ರ ತೆಗೆದುಕೊಳ್ಳಲಿ ಅನ್ನುವ ತರದಲ್ಲಿ ಬ್ಯಾಂಕ್ ಸಾಲಗಾರರ ಕೂಗಿಗೆ ಕಿವಿಗೊಡುವ ಮನಸ್ಸು ಮಾಡುತ್ತಿಲ್ಲ. ಶೆಡ್ಯೂಲ್ಡ್ ಬ್ಯಾಂಕ್ ಗಳ ಮೇಲೆ ನೇರವಾಗಿ ನಿಧಾ೯ರ ತೆಗೆದುಕೊಳ್ಳುವ ಅಧಿಕಾರ ರಾಜ್ಯಗಳಿಗೆ ಇಲ್ಲದ ಕಾರಣ ಅವರು ಕೂಡಾ ಸಣ್ಣಪುಟ್ಟ ಉದ್ಯೋಗಸ್ಥರು ವ್ಯಾಪಾರಿಗಳು ಬ್ಯಾಂಕ್ ಗಳಿಂದ ಮಾಡಿಕೊಂಡ ಸಾಲಗಳಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಹಾಗಾಗಿ ಇಂತಹ ಬಡ ಮಧ್ಯಮ ವಗ೯ದ ಸಾಲಗಾರರು ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವುದು ಅಕ್ಷರಶಃ ಸತ್ಯ.
ರಾಜ್ಯ ಸರಕಾರವೇನೊ ಸಹಕಾರಿ ಹಣ ಕಾಸುಸಂಸ್ಥೆಗಳಿಂದ ಪಡೆದ ಸಾಲಗಳ ಮರುಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಅದೇ ರೀತಿಯಲ್ಲಿ ರಾಜ್ಯ ದ ಅದೇಷ್ಟೊ ಸಣ್ಣಪುಟ್ಟ ವ್ಯಾಪಾರಸ್ಥರು ಬ್ಯಾಂಕ್ ಗಳಿಂದ ಪಡೆದು ಕೊಂಡ ಸಾಲಗಳ ಮರುಪಾವತಿಗೂ ವಿನಾಯಿತಿ ನೀಡಬೇಕೆಂಬ ಜನ ಸಾಮಾನ್ಯರ ತುತು೯ ಬೇಡಿಕೆಯನ್ನು ಕೇಂದ್ರ ಸರಕಾರದ ಗಮನಕ್ಕೂ ತರಬೇಕು ಅನ್ನುವುದು ರಾಜ್ಯ ಸರಕಾರದಲ್ಲಿ ಬಡ ಮಧ್ಯಮ ವಗ೯ದ ಕಳಕಳಿಯ ವಿನಂತಿ. ಈ ನಿಟ್ಟಿನಲ್ಲಿ ಲೇೂಕ ಸಭಾ ಸದಸ್ಯರುಗಳು, ವಿಧಾನಸಭಾ ಸದಸ್ಯರುಗಳು, ರಾಜ್ಯ ಮತ್ತು ಕೇಂದ್ರ ಸರಕಾರದ ಗಮನಕ್ಕೆ ತರಬೇಕು ಅನ್ನುವುದು ಜನಸಾಮಾನ್ಯರ ಒಡಲಾಳದ ವಿನಂತಿ.
ಲೇಖನ: ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ












